ಮೊದಲ ಕವನ

ಭಾವ ಪ್ರಾಸ ಎಲ್ಲ ಹಾಕಿ
ರಸಗಳೆಲ್ಲ ಒಳ್ಳೆ ಬಳಸಿ
ನನ್ನ ದನಿಯಲ್ ನಾದ ಕೊಟ್ಟು
ಬರೆದೆನೊಂದು ಕವನವ.

ಹೋಗಿ ಅಮ್ಮನೆದುರು ನಿಂತು,
ಚಂದ ಮಾಡಿ ಹಾಡಲ್ ನಾನು
ಅಮ್ಮ, ಬೆನ್ನು ತಟ್ಟಿ ಹೆಮ್ಮೆ ಪಟ್ಟು
ಮುದ್ದು ಮಾಡಿ ಕಳಿಸಿತು.

ಬೆಳಗೆ ಬೇಗ ಎದ್ದು ಓಡಿ ಬೇಗ
ಶಾಲೆಗ ಹೋಗಿ ಎಲ್ಲರೆದುರು ಓದಿದೆ.
ರಂಗ ಮಂಗ ಚೆಂಗರೆಲ್ಲ ಕೇಳಿ
ಖುಶಿಯ ಪಟ್ಟು ತೆರೆದ ಬಾಯ್ ಮುಚ್ಚವು!

ಬರೆದ ಹಾಳೆ ದಿಂಬಿನಡಿಗೆ ತುರುಕಿ
ತೆಗೆದು ನೂರು ಸಲವು, ಮತ್ತೆ ಅದನೆ ಓದಿದೆ
ಹೀಗೆ ಬಂತು, ಭಾವ ಹಲವು
ಬರೆದೆ ಮತ್ತೆ ಕವನ ಕೆಲವು.

ಹುಡುಕು ನೀನು ಎಲ್ಲ ಕಡೆಗೆ
ಮೊದಲ ಕವನ ಪ್ರಥಮ ಪ್ರೇಮ
ಕೊಡುವ ಖುಶಿಯು ಮರಳಿ ಸಿಗಲು ಸಾಧ್ಯವೇ?

- aniruddh

17 Aug 2020, 08:21 pm
Download App from Playstore: