ಕಿಲಾರಿ ಚಿಣ್ಣರು

ಎತ್ತಿನ ಗಾಡಿಯ ಹತ್ತಿದರೋಡುತ
ಚಿಣ್ಣರು ಎಲ್ಲರು ಒಟ್ಟಾಗಿ
ಎತ್ತನು ಹೂಡಿ ಜತ್ತಗಿ ಕಟ್ಟಿ
ಬಿಟ್ಟರು ಬಂಡಿಯ ಜೊತೆಗೂಡಿ //

ಕಿಲಾರಿ ಹೋರಿಯು ಓಡಲು ಹಾರಿ
ಹಾದಿಯೇ ನಡುಗಿತು ಹೌಹಾರಿ
ಸರಿಯಿತು ದಂಡು ಹಾರಿತು ಹಿಂಡು
ಸೇರಲು ಜನವೇಲ್ಲಾ ದುಂಡು - ದುಂಡು //

ನೋಡಲು ಮಂದಿ ಓಡಿತು ಬಂಡಿ
ಮಾಡುತ ಕಸ ಕಡ್ಡಿ ಚಿಂದಿ - ಚಿಂದಿ
ದೂರದ ನಾಯಿ ಧೈರ್ಯವ ಗುಂದಿ
ಬೋಗಳುತ ಓಡಿತು ಸಂದಿ - ಸಂದಿ //

ಗರ - ಗರ ಸುತ್ತಿ ಗುರಿಯನ್ನು ಮುಟ್ಟಿ
ಮರಳಿತು ಚಿಣ್ಣರ ಬಣ್ಣದ ಬಂಡಿ
ತುತ್ತುರಿ ಬಾರಿಸಿ ಕಿಲಾರಿ ಹೋರಿಗೆ
ಊರೆಲ್ಲಾ ಮೆರವಣಿಗೆ ಮಾಡಿದರು //

ಬಂಡಿಯನೇರಿದ ಚಿಣ್ಣರ ಬಾಯಿಗೆ
ಸಿಹಿತಿಂಡಿ ಊಟವ ಬಡಿಸಿದರು
ನೆಕ್ಕಲು ಉಪ್ಪಿನ ಕಾಯಿಯ ನಿಟ್ಟು
ಬಾಯಿ ಚಪ್ಪರಿಸಿ ಚಿಣ್ಣರ ನಲಿಸಿದರು //


ಕಲ್ಮೇಶ ಬಡಿಗೇರ
9743539657
.........ಬಾದಾಮಿ........

- Kalmesh Badiger

19 Aug 2020, 04:45 pm
Download App from Playstore: