ಒಲುಮೆ
ಸಾಗರದ ಅಲೆ ಮೇಲೆ
ಸುಳಿದಾಡೋ ತಂಗಾಳಿ
ಸುಮಧುರ ಸಖಿ ನೆನಪ
ತಾ ತೇಲಿ ತರಲಿ
ಬೆಟ್ಟದ ಮಲ್ಲಿಗೆ ಕಂಪು
ಕೆಂದಾವರೆ ಮನ ದಿಂಪು
ಅಂದ ಚೆಂದದ ನೆನಪು
ತಾ ಹೊತ್ತು ಬರಲಿ
ಚಲಿಸೋ ಮೊಡದಡಿಗೆ
ಗರಿಗೆದರಿ ನಲಿವಂತ
ನವಿಲ ನಾಟ್ಯದ ನೆನಪು
ನಲಿ ದೊಲಿದು ತರಲಿ
ಹೃದಯ ಅಂಗಳ ದೊಳಗೆ
ಅರಳೋ ಮಲ್ಲಿಗೆ ಮೋಗ್ಗಿಗೆ
ಮೃದು ಮಾತಿನ ಮುತ್ತೊಂದ
ತಾ ಹೊತ್ತು ಬರಲಿ
ಸುರಿಯೋ ಮಳೆ ಗಾಳಿಗೆ
ಸ್ವರ ನಿನಾದವ ಬೆರೆಸಿ
ಸಂಗೀತದ ಸರಸ್ವತಿಯ
ಜೊತೆ ಕರೆದು ತರಲಿ
ಕಲ್ಮೇಶ ಬಡಿಗೇರ
9743539657
..........ಬಾದಾಮಿ.......
- Kalmesh Badiger
19 Aug 2020, 05:04 pm
Download App from Playstore: