ಮಳೆರಾಯ
ಕೇಳಿರಣ್ಣಾ ಇದ ಕೇಳಿರಣ್ಣಾ
ಮಳೆಯೊಂದು ಬಂದು ಬಿತ್ತಾ
ಹಳ್ಳ - ಕೊಳ್ಳ ನದಿಯೆಲ್ಲ ತುಂಬಿ
ಊರೊಳಗೆ ಹೊಕ್ಕು ನಿಂತಾ. //
ಸುತ್ತ ಸುಡುಗಾಡು ಬಟ್ಟ ಬಯಲು
ಹೊಲಗದ್ದೆ ಮುಳುಗಿ ಹೋತಾ
ತತ್ತರಿಸಿ ಹೋದ ಜನವೆಲ್ಲ ಓಡಿ
ಏರಿ - ಮ್ಯಾರಿ ಹತ್ತಿ ಕುಂತಾ. //
ಕಟ್ಟಿದ ಹಗ್ಗ ಬಿಚ್ಚ ಲಾಗದೆ
ದನ - ಕರುವು ಒದರುತಿತ್ತಾ
ಬಿಚ್ಚಿ ಬಿಟ್ಟರು ದಿಕ್ಕು ಕಾಣದೆ
ನೀರೊಳಗೆ ಲಿನವಾಯ್ತಾ .//
ಮನೆಯ ಬಾಗಿಲಿಗೆ ಬಂದ ನೀರು
ಮಾಳಿಗೆಯ ವರೆಗೆ ಬಂತ
ಕಾಳು - ಕಡಿ ಕರಿ ಮಣ್ಣು ಕರಗಿ
ಕಣ್ಮುಂದೆ ತೇಲಿ ಹೋಯ್ತಾ.//
ಹಸಿವ ನೀಗಿಸಲು ಹಸುಳೆಗಳಿಗೆ
ಮೊಲೆ ಹಾಲು ಬತ್ತಿ ಹೋಯ್ತಾ
ಹೆತ್ತ ತಾಯಿ ಕಣ್ಣೀರ ಸೊರಗಿ
ಕರೆಯೊಂದು ಮಾತ್ರ ಇತ್ತಾ .//
ಎತ್ತ ನೋಡಿದರೂ ಸುತ್ತ ನೀರು
ಹೆಡೆ ಎತ್ತಿ ಆಡುತಿತ್ತ - ಸಾಗುತಿತ್ತ
ಸತ್ತ ಹೆಣವು ಕಣ್ಮುಂದೆ ತೇಲಿ
ಉರುಳುರಿಳಿ ಹೊಗುತ್ತಲಿತ್ತ .//
ಕಲ್ಮೇಶ ಬಡಿಗೇರ
9743539657
......ಬಾದಾಮಿ....
ಕೃಷ್ಣೆ ,ಘಟಪ್ರಭಾ,ಮಲಪ್ರಭಾ ನದಿ ತೀರದಲ್ಲಿ ನೆರೆ ಹಾವಳಿಗೆ ತುತ್ತಾಗಿ ಕಣ್ಣೀರ ಕೋಡಿ ಯಲ್ಲಿ ಮುಳುಗಿರುವ ಜನತೆಗೆ ಅರ್ಪಿಸುತ್ತೇನೆ
- Kalmesh Badiger
19 Aug 2020, 05:54 pm
Download App from Playstore: