ಮನಸ್ಸು ಮೆಚ್ಚಿದೆ..
ನನ್ನ ಅಂಗೈಯಲಿ ನಿನ್ನ ಹೆಸರನ್ನು ಬರೆದು ಕೂಗಿರುವೆ ಕೇಳು.
ನಿನ್ನ ಅಂಗಾಲಿನಲಿ ನನ್ನ ಮನಸ್ಸನ್ನು ತುಳಿದು ನೀ ಎಲ್ಲಿ ಹೊರಟಿರುವೆ ಹೇಳು.
ನಿನ್ನ ಕಾದು ಕಾದು ಕಾಲನೆ ಕಳೆದುಹೋಗಿದೆ.
ಕ್ಷಮಿಸಿ ಓಪ್ಪಿಕೊಳದಂತ ತಪ್ಪು ನಾ ಏನು ಮಾಡಿದೆ.
ನನ್ನ ಕಾಡೊ ನಿನ್ನ ಕಣ್ಣಿಗು ಕೂಡ ನಾನು ಕಾಣದಗಿದೆ.
ಸಾರಿ ಸಾರಿ ಕೂಗಿದರು ಕೇಳದಷ್ಟು ದೂರ ನೀನು ಸಾಗಿದೆ.
ಕಣ್ಣಾ ಕಾಯೋ ರೆಪ್ಪೆಕೂಡ ತನ್ನ ಕಣ್ಣ ತಾನೇ ಚುಚ್ಚಿದೆ.
ನನ್ನ ಮನಸ್ಸಿಗೇನು ತಿಳಿಯುತ್ತಿಲ್ಲ , ನಿನ್ನ ಮರ್ಮ ಏನಿದೆ.
ಬೇಡಿ ಬೇಡಿ ಕೇಳಿದರೆ, ಅದರಲ್ಲಿ ಪ್ರೀತಿ ಎಲ್ಲಿದೆ.
ಬೇಡ ಎಂದು ಹೇಳಿ ಹೊರಟವಳನ್ನೇ ಮನಸ್ಸು ಮೆಚ್ಚಿದೆ.
- NaveenkumarK
24 Aug 2020, 12:32 pm
Download App from Playstore: