ಅಜ್ಜ

ಅಜ್ಜ ಅಜ್ಜ ನಮ್ಮಜ್ಜ
ಕಥೆಯನು ಹೇಳು ನಿನಜ್ಜ
ಕುಂತು ಕೆಳುತಿರೆ ನಾವೆಲ್ಲಾ
ಮೈ ಜುಂ ಅನಬೇಕು ಕೇಳಜ್ಜ //

ರಾಜನ ಕಥೆ ಯ ಹೇಳಜ್ಜ
ರಾಣಿಯ ಕಥೆಯ ಹಾಡಜ್ಜ
ರಾಜಾ ರಾಣಿ ಎರಡು ಹೇಳದೆ
ಮಂತ್ರಿಯ ಆಟವ ಆಡಿಸಜ್ಜ //

ಕೈಯ್ಯಲ್ಲಿ ಕೋಲು ಹಿಡಿಯಜ್ಜ
ಹೊಲಗಳ ಕಡೆಗೆ ನಡೆಯಜ್ಜ
ಕಾಗೆ,ಕೋಗಿಲೆ ಗಿಳಿಗಳ ತೋರುತಾ
ಅದರಂತೆ ಹಾಡಲು ಕಲಿಸಜ್ಜ //

ಕತ್ತಲಾಗಲು ನಮ್ಮನ್ನೆಲ್ಲ
ಮಾಳಿಗೆ ಮೇಲೆ ಕರೆ ಅಜ್ಜ
ಚುಕ್ಕೆ,ಚಂದ್ರಮರ ತೋರುತ
ಅವುಗಳ ಎಣಿಸಲು ಹೇಳು ನಮ್ಮಜ್ಜ //

ಶಾಲೆಯ ಓದು ಸಾಕಜ್ಜ
ಮನೆಗೆಲಸ ಎಲ್ಲ ಮುಗಿತಜ್ಜ
ಮಲಗುವ ಮೊದಲು ಮೆಲ್ಲಗೆ
ನಮಗೆ ಹಾಡನು ಹೇಳು ನೀ ಅಜ್ಜ //

ಕಲ್ಮೇಶ ಬಡಿಗೇರ
9743539657
.........,..ಬಾದಾಮಿ.......

- Kalmesh Badiger

25 Aug 2020, 05:59 pm
Download App from Playstore: