*ಅವಳ ಪ್ರೀತಿ ನನಗಾಗಿ*.....

*ಅವಳ ಪ್ರೀತಿ ನನಗಾಗಿ*.....

ನನ್ನೋಳಗಿನ ಪ್ರೀತಿಯ ಸಂದೇಶ ತಿಳಿಸಲು ಬಂದೆ
ಒಪ್ಪಿಕೋ ನನ್ನ ಪ್ರೀತಿಯ ರಾಜಕುಮಾರಿ ...
ನಿನ್ನ ಭಾವನೆಗಳಿಗೆ ಸ್ಪಂದಿಸಿ
ನೀರೆರೆದು ಪೋಷಿಸಿ ಬೆಳಸಿ
ಪಾರಿವಾಳದಂತೆ ನಿನ್ನ ಕನಸುಗಳ
ನನಸು ಮಾಡಿ ರೆಕ್ಕೆಗಳ ಕಟ್ಟಿ
ಆಗಸದೀ ಹಾರಾಡಿಸುವೆ.....
ನನ್ನಿ ಪ್ರೀತಿಯ ಒಲಮೆಯ ತೋರು ಬಾ ಗೆಳತಿ

ನಿನ್ನ ಸೌಂದರ್ಯಕ್ಕೆ ಮಾರುವ ಹೋದ
ಮನ್ಮಥನು ನಾನು
ನನ್ನ ಹೃದಯದ ಅಂತರಾಳದಲಿ ರತಿಯಂತೆಯೇ
ಕಾಣುವೆ ನೀನು...
ನೀ ನನ್ನಿಂದ ದೂರವಾಗಿ ಪ್ರೀತಿಯ ಬೇಗೆಯಲ್ಲಿ
ಸುಟ್ಟು ಬಿಡಬೇಡ..
ಬಂದು ಸೇರು ನನ್ನ ಪ್ರೀತಿಯ ಆಹ್ವಾನಕೆ
ನನ್ನ ಎದೆಯ ಗೂಡಿನೊಳಗೆ..

ಸೀತೆಯ ಅಂದವಾದ ಸೌಂದರ್ಯಕೆ
ರಾವಣನಂತವನೇ ಮಾರುಹೋದ
ಭಗವದ್ಗೀತೆಯನ್ನೇ ಬೋಧಿಸಿದ ಶ್ರೀ ಕೃಷ್ಣ
ರಾಧೆಯ ಮನಸ್ಸನ್ನೆ ಕಳ್ಳನಂತೆ ಕದ್ದ..
ಶಿವನ ಕೋಪಕ್ಕೆ ಸುಟ್ಟು ಹೋದ
ರತಿ- ಮನ್ಮಥರು ಪ್ರೀತಿಯಲ್ಲೆ ಹೊಂದಾದರು.
ನನ್ನ ನಿಶ್ಕಲ್ಮಶ ಪ್ರೀತಿಯ ಒಪ್ಪಿಕೊ..
ಜೋತೆಯಾಗಿ ಸೇರಿ....

ಮುಂದಿನ ಜೀವನದ ಬಂಡಿ ಏಳೆಯೋಣಾ..

ರಚನೆ-ಸಂಜೀವ್ ಚಿನ್ನೇನಹಳ್ಳಿ

- Bhavish tv

26 Aug 2020, 10:07 pm
Download App from Playstore: