ಆನೆ

ಅಪ್ಪ ಚಿಕ್ಕಪ್ಪ ನೋಡ ಬಾರಪ್ಪ
ಆನೆ ಬಂದೈತಪ್ಪ
ಪುಸ್ತಕದಲ್ಲಿ ನೋಡಿದ್ದಕಿಂತ
ಎಷ್ಟು ದೊಡ್ಡದು ಐತೆಪ್ಪ !

ಕಾಲುಗಳೆಲ್ಲ ನಮ್ಮನೆ ಮುಂದಿನ
ಮರದಂತಿಹುದಪ್ಪಾ!
ಖ್ವಾರಿಯ ಮೇಲೆ ಏರಿ ಕುಳಿತರೆ
ಮುರಿಯುತ್ತವೇನಪ್ಪ ?

ಹೆಜ್ಜೆಯ ನಿಟ್ಟರೆ ನೆಲವೆಲ್ಲ
ಗಡ ಗಡ ನಡುಗುತ ಲಿಹುದಪ್ಪಾ
ಗಲ್ಲದ ಕೆಳಗೆ ಸಣ್ಣನೆ ಬಾಯಿಯು
ಕಾಣುತ ಲಿಹುದಪ್ಪ

ಸೊಂಡೆಯ ನೇಕೆ ಮೇಲಕ್ಕೆ
ಕೆಳಕ್ಕೆ ಮಾಡುತಲಿಹುದಪ್ಪಾ !
ಕೈಗೆ ಸಿಕ್ಕರೆ ನಮ್ಮನ್ನೆಲ್ಲಾ
ತಿನ್ನಬಹುದಾ ಹೆಳಪ್ಪಾ ?

ಆನೆ ಎಂದರೆ ಹಿಗಿರುತ್ತಂತಾ
ಇವತ್ತು ತಿಳಿತಪ್ಪಾ
ಚಿತ್ರಕ್ಕಿಂತ ನೋಡಲು
ಈ ತರ ಆನೆ ಸಾಕಪ್ಪಾ

ಕಲ್ಮೇಶ ಬಡಿಗೇರ
9743539657
........ಬಾದಾಮಿ......

- Kalmesh Badiger

28 Aug 2020, 06:03 pm
Download App from Playstore: