ಮಳೆ

ಮಳೆ ಬಂತೋಮ್ಮೆ ಮಳೆ
ತುಂಬಿ ಬಂತೋ ಹೊಳೆ
ದೋಣಿಯ ಮಾಡಿದೆ ಖಾಗದದಿ
ತೇಲಲು ಬಿಟ್ಟೇನು ಮಳೆ ನಿರಿನಲಿ //

ಬಿರುಸಿನ ಗಾಳಿಯು ಬೀಸಿತ್ತು
ಜಿಟಿ ಜಿಟಿ ಮಳೆಯು ಸುರಿದಿತ್ತು
ರಬಸಧಿ ನೀರು ಹರಿದಿತ್ತು
ಕಪ್ಪೆಯು ಗೋಟರು ಹಾಕಿತ್ತು//

ಹಕ್ಕಿಗಳೇಲ್ಲ ಗೂಡನು ಸೇರಿತು
ಮೇವಿನ ಬಂಡಿಯು ತೆಲೋಯ್ತು
ತೇರಿನ ಗಾಲಿಯು ತೊಯ್ದಿತ್ತು
ಮಾವನ ವಲ್ಲಿಯು ಹರಿದಿತ್ತು//

ತಿಪ್ಪೆ ಕೊಂಪೆಯು ತುಂಬೊಯ್ತು
ಕೆರೆ ನೀರೆಲ್ಲಾ ಕೆಂಪಾಯ್ತು
ಕೊಲ್ಮಿಂಚು ಒಂದು ಮಿಂಚಿತ್ತು
ಕಡೆಮನಿ ಗಿಡವು ಮುರಿದಿತ್ತು//

ಚೆಂದದ ಊರಿಗೆ ಕಳೆ ಬಂತು
ಅಮ್ಮನ ಕೈಯಲಿ ಉಂಡಿಯಿತ್ತೋ
ತಂಡಿಯು ಹಾರಿ ಹೋಗಿತ್ತು
ತಕ ತೈ ಚಿಣ್ಣರ ಕುಣಿಸಿತ್ತು //

ಕಲ್ಮೇಶ ಬಡಿಗೇರ
9743539657
.........ಬಾದಾಮಿ......

- Kalmesh Badiger

29 Aug 2020, 08:06 am
Download App from Playstore: