ನೀನಾಗು

ಅರಿಯಲೊಲ್ಲದವನ
ತೋಳೆಳೆದು ಕರೆದು ಕಲಿಸಿ ಗುರುವಾಗು
ಜ್ಞಾನದ ಬೆಳಕಲ್ಲಿ ಹೃದಯ ಕಣ್ಣು ತೆರೆದು ಕೊಳ್ಳಲೂ ಬಹುದು

ಅರಿಯ ಬೇಕೆಂಬವನ
ಓಲೈಸಿ ಕರೆದು ಕಲಿಸಿ ಗುರುವಾಗು
ಮುಷ್ಟಿ ಜ್ಞಾನದಲ್ಲೇ ಸೃಷ್ಟಿಗೆ ಹಿತನಾಗಬಹುದು

ಅರಿತವನ ನುಡಿಗೆ ನೀ ತಲೆತೂಗು
ಬೆಚ್ಚಗಿನೆದೆ ಗೂಡಿನಲ್ಲಿ ನೀ
ಗುರುವಿಗೇ ಗುರುವೆಂದೆನಿಸಿಕೊಳ್ಳಲೂ ಬಹುದು

- R.D

01 Sep 2020, 05:48 pm
Download App from Playstore: