ಬೇಸಿಗೆ ರಜೆ

ಬೇಸಿಗೆ ರಜೆ ಬಂದಿತು ಅಂದ್ರೆ
ನಾವೆಲ್ಲಾ ಖುಷಿ ಯಾಗಿರ್ತಿವಿ
ಶಾಲೆಯ ಗುರುಗಳ ಕಾಟವ
ಕಳಕೊಂಡು ಹಾಯಾಗಿರತಿವಿ //

ಅಪ್ಪ ಅಮ್ಮನ ಕಟ ಕಟ ತಾಳದೆ
ಅಜ್ಜಿಯ ಊರಿಗೆ ಒಡ್ತೀವಿ
ಅಜ್ಜ ಅಜ್ಜಿಯರ ಜೊತೆಯಲಿ
ಆಟವ ಆಡುತಾ ಇರುತಿವಿ //

ಗೆಜ್ಜೆಯ ಕಟಗೊಂದು ಎತ್ತನು
ಹೂಡಿ ತೋಟಕೆ ಹೋಗ್ತೀವಿ
ಹೆಜ್ಜೆಯ ಎಣಿಸುತ್ತಾ ತೆಂಗಿನ
ಮರಗಳ ಸುತ್ತುತ ಲಿರತಿವಿ //

ಶೇಂಗಾ ಜೋಳವ ಸುಟಗೊಂದು
ಬೇಳಸಿಯ ತಿನ್ನುತ ಲಿರತಿವಿ
ಅನ್ನದ ಉಟವ ಮರೆತು
ಗಿಣ್ಣವ ಉನ್ನುತ ಲಿರತಿವಿ //

ಬೇಸಿಗೆ ಮುಗಿಯಲು ನಮ್ಮಯ
ಊರಿನ ಮನೆಗೆ ಬರುತೆವೇ
ಶಾಲೆಯ ಸೇರಿ ಪಾಠ ವ ಕೇಳುತ
ಓದುತ ಜಾಣರು ಅಗ್ತಿವಿ //

ಕಲ್ಮೇಶ ಬಡಿಗೇರ
9743539657
.........ಬಾದಾಮಿ......

- Kalmesh Badiger

03 Sep 2020, 05:53 pm
Download App from Playstore: