ಹಾಸ್ಯ ಚಟಾಕಿ

ಮದುವೆಗು ಮುನ್ನ
ಹುಡುಗರು ಸುತ್ತುವರು
ಬೀದಿ ಬೀದಿಗಳಲ್ಲಿ
ಬೀದಿ ಬಸವನಂತೆ
ಮದುವೆಯ ನಂತರ ಆಗುವರು
ಗುಡಿ ಬಸವನಂತೆ

ಸೇರಗು ಹಿಡಿದು
ಅಮ್ಮ ಅಮ್ಮ ಎಂದು
ಹಿಂದೆ ಹಿಂದೆ ಸುತ್ತಿದ್ದರು ಅಂದು
ಇಂದು ಸುತ್ತುವರು
ಚಿನ್ನ ಬಂಗಾರವೆಂದು
ಹೆಂಡತಿ ಹಿಂದೆ ಹಿಂದೆ

ತಾಯಿ ಹೇಳಿದ ಮಾತು
ತಲೆಗೆ ಹೋಗುವುದಿಲ್ಲ
ಹೆಂಡತಿ ಹೇಳಿದ ಮಾತು
ಚುಚ್ಚುವುದು ಮಾತ್ರ ಮನಸ್ಸಿಗೆ

- ರಾಜು ಹಾಸನ

03 Sep 2020, 07:24 pm
Download App from Playstore: