ಪ್ರತಿರೋಧನೆ

"ಪ್ರತಿರೋಧನೆ"

ಅವಳೆದೆಯ ಇಳಿಬಿದ್ದ
ಮಾಂಸದ ಮುದ್ದೆಗಳಂತೆ 
ಗತ ವೈಭವದ ಪ್ರೀತಿ

ಬೆರಳು ಬೆಚ್ಚಗಿನ
ಬಯಕೆಗಳು ತಣ್ಣಗಾಗಿ
ಚಿರ ನಿದ್ರೆಗೆ ಜಾರಿವೆ

ಕಾವು ಕಳೆದಕೊಂಡ ಕಾಯ 
ಪಡೆದ, ಕಳೆದುಕೊಂಡದ್ದರ 
ಕುರಿತು ಲೆಕ್ಕಾಚಾರ ನಡೆಸಿದೆ

ಸೋತ ಕಂಗಳ ಕಣ್ಣೀರು
ಮೈಮೇಲಿನ ಗೀರು,
ಗಾಯದ ಗುರ್ತುಗಳು
ಎದುರಿಟ್ಟುಕೊಂಡು
ಪಂಚನಾಮೆಗೆ ತೊಡಗಿದೆ

ಭಗ್ನಾವಶೇಷ ಹೃದಯ
ಗುಮ್ಮಟದಲ್ಲಿ ಈಗ
ಬರೀ ಪ್ರತಿಕಾರದ ಧ್ವನಿ
ಪ್ರತಿರೋಧಿಸುತಿದೆ.

- ashfaq peerzade

03 Jul 2016, 08:56 pm
Download App from Playstore: