ಹೆಣ್ಣಿನ ಶೋಷಣೆ

ಮಗಳಿಗೆ ಕೊಡುವರು ಆಭರಣವಾ
ಕರುಳು ಬಳ್ಳಿಯ ಪ್ರೀತಿಗಾಗಿ
ವರನಿಗೆ ಕೊಡವರು ಉಡುಗೊರೆಯ
ಮಗಳು ಚೆನ್ನಾಗಿರಲೆಂದು

ತಾಯಿಯೋಬ್ಬಳು ಮನೆಯಲ್ಲಿದ್ದರೆ
ಗುಡಿಸಿಲು ಇರುವುದು ಅರಮನೆಯಂತೆ
ಕುಡುಕ ಗಂಡನಿದ್ದರೆ
ಅರಮನೆಯು ತಿಪ್ಪೇ ಗುಂಡಿಯಾಗುವುದು

ಸೆರಗು ಕಟ್ಟಿ ಸಾಕುವಳು
ಮನೆ ಮಂದಿಯ ತಾಯಿಯಾಗಿ
ಕುಡಿದು ಕಳೆಯುವನು ಮನೆ ಮಂದಿಯ
ಕುಡುಕ ಗಂಡನಾಗಿ

ದುಡಿದು ಸಾಕುವುದು ಹೆಂಡತಿ
ಕುಡಿದು ವಾಲಾಡುವುದು ಗಂಡಸು
ಬಾಳುವುದು ಸಂಗಾತಿಯ ನೆರಳಲ್ಲಿ
ಆದರೂ ಬೇಕು ವರದಕ್ಷಿಣೆ ತಿಂದು ತೇಕಲು

ಮಗಳು ಸುಖವಾಗಿರಲೆಂದು ಕೊಡುವರು
ಕೂಡಿಟ್ಟ ದುಡ್ಡು ವರದಕ್ಷಿಣೆಯಾಗಿ
ಆದರೂ ತಪ್ಪಿಲ್ಲ ಹೆಣ್ಣಿನ ಗೋಳು
ವರನು ಸುಖವಾಗಿರಲೆಂದು ಕೊಡುವುದಿಲ್ಲ
ವಧು ದಕ್ಷಿಣೆಯ
‌ ಆದರೂ ನಿಂತಿಲ್ಲ ಹೆಣ್ಣಿನ ಶೋಷಣೆ

- ರಾಜು ಹಾಸನ

05 Sep 2020, 12:51 am
Download App from Playstore: