ಶಿಕ್ಷಕರು ನೀವು

ಶಿಕ್ಷಕರು ನೀವು
ಜ್ಞಾನದ ರಕ್ಷಕರು
ಮೂಲಾಕ್ಷರ ಕಲಿಸಿ
ಮಕ್ಕಳಿಗೆ ವ್ಯಕ್ತಿಯ
ರೂಪ ಕೊಟ್ಟವರು ನೀವು

ಅಜ್ಞಾನದ ಕತ್ತಲೆಯ ಹೋಗಲಾಡಿಸಿ
ಸುಜ್ಞಾನದ ದೀಪ ಬೆಳಗಿಸಿ ದವರು ನೀವು
ತಿದ್ದಿತೀಡಿ ವಿದ್ಯಾರ್ಥಿಯ ಜೀವನ
ರೂಪಿಸಿದವರು ನೀವು

ಮಕ್ಕಳು ಎಡವಿದಾಗ
ದಿಗ್ದರ್ಶನ ತೋರಿದವರು ನೀವು
ಮಕ್ಕಳ ಸಾಧನೆಯ ಹಾದಿಗೆ
ದಾರಿದೀಪವಾದವರು ನೀವು

ಮಕ್ಕಳಿಗೆ ಮಾರ್ಗದರ್ಶನ ನೀಡುತ
ದೇಶದ ಒಳಿತಿಗೆ ಶ್ರಮಿಸುತ
ಭವ್ಯ ಭಾರತ ಕಟ್ಟಿದವರು ನೀವು

ನೋವನ್ನು ನುಂಗಿ
ಕಷ್ಟಗಳನ್ನು ಸಹಿಸಿಕೊಂಡು
ಮಕ್ಕಳ ಡಗೆ ಮುಗುಳ್ನಗೆ ಬೀರಿ
ಮಕ್ಕಳ ಭವಿಷ್ಯ ರೂಪಿಸಿದವರು ನೀವು

- ಶಹಾಬುದ್ದೀನ್ ಕೆ. (ಕಾವ್ಯಪ್ರೀಯ)

05 Sep 2020, 07:46 pm
Download App from Playstore: