ಮಾತು

ಮಾತುಗಳು ಮುತ್ತಿನಂತೆ
ಕೆಲವೊಮ್ಮೆ ಸುಂದರ ಸ್ವಾತಿಮುತ್ತಿನಂತೆ,
ಇನ್ನೂ ಕೆಲವೊಮ್ಮೆ ಪರರ ಹೃದಯದಲಿ
ಕಿರಿಕಿರಿ ಮುತ್ತು ಕೊಂಡಂತೆ...!!

ಚಿಂತೆಯಲ್ಲಿ ಬೆಂದವನಿಗೆ
ಮಾತುಗಳು ವ್ಯರ್ಥವಂತೆ ,
ಏಕಾಂಗಿಯಾದವನಿಗೆ ಮಾತೆಯೆಲ್ಲವಂತೆ !!!

ಅಂತೆ , ಕಂತೆಗಳ ನಡುವೆ
ಬದುಕಿದವನಿಗೆ ಜೀವನವೇ ಸಾಕಂತೆ ,
ಹೇಳುವವನಿಗೆ , ಅವನಿಗಿಂತ
ಇತರರ ಜೀವನದಲ್ಲಿ ಧೋಷವಂತೆ !!!

ಮಾತು ಬರದವನಿಗೆ ಶಾಪವಂತೆ .
ಮೌನ ಕೆಲವೊಮ್ಮೆ ಅಸ್ತ್ರವಂತೆ ...!!

- Deepak R

06 Sep 2020, 01:32 pm
Download App from Playstore: