ಗಜಲ್

ಅತಂತ್ರ ಬದುಕಿನ ದಾರಿಯಲಿ....

ಎನ್ನೆದೆಗೊರಗಿ ಮಗುವಾಗಿ ಮಲಗಿ ನೋಡೊಮ್ಮೆ ಸಾಕು
ಎದೆಗೂಡಲ್ಲಿ ಕದಲುವ ಮೌನಮಿಡಿತ ಆಲಿಸೊಮ್ಮೆ ಸಾಕು

ನಿನ್ನ ಕೇಶರಾಶಿಯಲಿ ಎನ್ನ ಬೆರುಳುತುದಿ ಮೀಟುತಿರಲಿ ಪ್ರೇಮರಾಗ
ಹೃದಯ ಹಾಡು ಮೂಕಾಗಿ ರೋಧಿಸುವುದು ಆಲಿಸೊಮ್ಮೆ ಸಾಕು

ಇಲ್ಲಿ ತೊಟ್ಟಿಕ್ಕುವ ರಕುತದಲಿ ಕೆಂಗುಲಾಬಿ ಬಿರಿಯುತಿದೆ
ಕಾವ್ಯ ಕೆಂದುಟಿಗಳಿಂದ ಸ್ರವಿಸುವ ರಕ್ತಗಾನ ಆಲಿಸೊಮ್ಮೆ ಸಾಕು

ಬೊಗಸೆಯಿಂದ ಸೋರಿ ಹೋಗುತಿದೆ ಮರಳಿನಂತೆ ಬದುಕು
ಮರಳಗಾಡಿನಲ್ಲಿ ನಿಟ್ಟುಸಿರುಗಳು ಬೇಯುವ ಸದ್ದು ಆಲಿಸೊಮ್ಮೆ ಸಾಕು

ನಿನ್ನಲ್ಲಿ ನೂರಾರು ಕನಸಗಳು, ಸಾವಿರಾರು ಪ್ರಶ್ನೆಗಳು ಅಲೆಮಾರಿ ಬದುಕಿನ ಚಿಂತೆ 
ಬಿರುಗಾಳಿಯಲೆಗೆ ತತ್ತರಿಸುವ ಹಾಯದೋಣಿ ಶಬುಧ ಆಲಿಸೊಮ್ಮೆ ಸಾಕು

ದುಃಖದುಮ್ಮಾನಗಳು ಬಂದು ಹೋಗುವಂತೆ, ಸುಖಸಮ್ಮಾನಗಳು ಸರಿದ್ಹೋಗುತ್ತವೆ
ಕಾಲಡಿ ಕುಸಿಯುವ ಅತಂತ್ರ ದಾರಿಯಲಿ ಗುರಿಯತ್ತ ಪಯಣಿಸುವ ಹೆಜ್ಜೆ ಸಪ್ಪಳ ಆಲಿಸೊಮ್ಮೆ ಸಾಕು.

- ashfaq peerzade

03 Jul 2016, 09:01 pm
Download App from Playstore: