ನಾನು ಮತ್ತು ಪ್ರೀತಿ
ನನಗೆ ತಿಳಿದು ತಿಳಿಯಾದೆ
ನನ್ನೆದೆಯಲ್ಲಿ ಹುಟ್ಟಿತು ಪ್ರೀತಿ
ಪ್ರೀತಿಯಿಂದ ಅಪ್ಪಿಕೊಂಡೆನು
ನನ್ನವಳ ಪ್ರೀತಿಯ
ಕಟ್ಟಿಕೊಂಡೆನು ಕನಸುಗಳ
ನನ್ನ ಮಡದಿಯೆಂದು
ಒಬ್ಬರಿಗೆ ಒಬ್ಬರು ಪ್ರೀತಿಸಿದೆವು
ಇದ್ದರೂ ಸತ್ತರು ಒಟ್ಟಿಗೆಯೆಂಬಂತೆ
ಇಬ್ಬರು ಹಂಚಿಕೊಳ್ಳುತ್ತಿದ್ದೇವು
ಹೃದಯಾದ ಮಾತು ಮನಸ್ಸಿನ ನೋವು
ಬಿಟ್ಟಿರಲಾರದಷ್ಟು ಅಚ್ಚಿಕೊಂಡೆವು
ಮನಸು ಕೊಟ್ಟೆವು ಒಬ್ಬರಿಗೆ ಒಬ್ಬರು
ತುದಿಗಾಲಲ್ಲಿ ನಿಲ್ಲುತ್ತಿದೆವೂ
ನೋಡಲು ಮಾತನಾಡಲು
ದಿನಾಲೂ ಕಿತ್ತಾಟವಾಡುತ್ತಿದ್ದೆವು
ಮಾತನಾಡುವ ಸಲುವಾಗಿ
ನನ್ನವಳು ಕಾಣದಿದ್ದರೆ
ನಾ ಆಗುತ್ತಿದೆ ಹುಚ್ಚನಂತೆ
ಅವಳು ಕೂಡ ಬಿಟ್ಟು ಇರಲಾರಳು
ಈ ನನ್ನ ಪ್ರೀತಿಯಿಲ್ಲದೆ
ಯಾರ ಕಣ್ಣು ಬಿತ್ತೋ ಗೋತ್ತಿಲ್ಲ
ನಮ್ಮಿಬ್ಬರ ಪ್ರೀತಿಗೆ
ದೇವರೆ ನಾಚುತ್ತಿದ್ದ ಅಂದು
ನಮ್ಮಿಬ್ಬರ ಪ್ರೀತಿ ಕಂಡು
ದೇವರೇ ಕೊರಗುತ್ತಿದ್ದಾನೆ ಇಂದು
ಹೊಡೆದು ಹೋದ
ನಮ್ಮಿಬ್ಬರ ಪ್ರೀತಿಯ ಕಂಡು
ಆದರೂ ಮರೆಯೋದುಂಟೆ
ನಮ್ಮ ಪ್ರೀತಿಯ
- ರಾಜು ಹಾಸನ
07 Sep 2020, 12:59 am
Download App from Playstore: