ಕವಿತೆ
ಕವಿತೆ ಒಂದು ಬರೆದೆ ನಾನು
ನಿನ್ನ ಚೆಲುವ ನಗುವಿಗೆ
ಕತೆಯ ಒಂದು ಬರೆದೆ ನೀನು
ನನ್ನ ಮಧುರ ಬದುಕಿಗೆ //
ಮೊದಲ ಪ್ರೇಮದ ಪತ್ರ
ಮೊದಲ ಪ್ರೀತಿಯ ಚಿತ್ರ
ಅದಲು ಬದಲು ಆಗಲಿಲ್ಲ
ತೊದಲು ಮಾತು ನುಡಿಯಲಿಲ್ಲ //
ವಲಿದು ಬಂದು ನಿಲ್ಲಲಿಲ್ಲ
ಮನದಿ ಬಂದು ಇಣುಕಲಿಲ್ಲ
ಒಲವಿನಿಂದ ನಲಿಯಲಿಲ್ಲ
ಬಿಡುವು ನುಡಿಯಲಿಲ್ಲ //
ಪ್ರಣಯ ರಾಗ ಹಾಡಲಿಲ್ಲ
ನಯನ ದಿಂದ ಸೆಳೆಯಲಿಲ್ಲ
ಆದರೂ ಮನದಾಳದಲ್ಲಿ
ಮಧುರ ವಾಗಿ ಮೂಡಲಿಲ್ಲ //
ಎನಗೆ ನೀನು ಕವಿತೆಯಾದೆ
ನಿನಗೆ ನಾನು ಕಥೆಯೇ ಆದೆ
ಕವಿತೆ ಕಥೆಯ ಮಿಲನ ನೆನೆದು
ಮನದಿ ನೆನೆದು ಕೊರಗಿದೆ //
ಕಲ್ಮೇಶ ಬಡಿಗೇರ
9743539657
.......ಬಾದಾಮಿ......
- Kalmesh Badiger
09 Sep 2020, 08:21 am
Download App from Playstore: