ನೀ ಎಲ್ಲಿರುವೆ

ಮಧುರ ಪ್ರೀತಿಯ ತೊರೆದು
ಮರೆಯಲ್ಲಿ ಇರುವೆ ನಿಹ್ನೇಗೆ
ಮೃಧು ಮಾತಿನ ಸಂದೇಶ
ನೀಡದೆ ನೀ ಎಲ್ಲಿರುವೆ //

ಪ್ರೀತಿಯ ಅಮೃತ ನೀಡಿದೆ
ಪ್ರೇಮದ ಪಲ್ಲವಿ ನುಡಿಸಿದೆ
ಪ್ರಣಯ ರಾಗವ ಹಾಡಿ
ಹಾರಿ ಹೋಗಿ ನೀ ಎಲ್ಲಿರುವೆ //

ಹಸಿರು ಕಾನನ ವೆನಗೆ
ಮುಸುಕು ಹಾಕಿದ ಮಾಯೆ
ನುಸುಳಿ ಹೋದರು ಒಳಗೆ
ಬರೀ ಮೊಸಳೆ ಕಣ್ಣೀರು //

ಸರಿಯಲಾರದ ಹೊತ್ತು
ಸುರಿಸ ದಾಗಿದೆ ಮುತ್ತು
ತನುವಿನೊಳಗಿನ ತವಕ
ತೆಯುತ್ತೀರುವುದು ಮನವ //

ಅಂದನ ಬಾಳಿನೊಳು
ಆನಂದದ ಅಲೆ ಬಂದಂತೆ
ಬಂದು ಬಿಡು ನನ್ನೇದುರೆಂದು
ಕೊರಗುತಲಿರುವೆ ನೀ ಎಲ್ಲಿರುವೆ //

ಕಲ್ಮೇಶ ಬಡಿಗೇರ
9743539657
.....ಬಾದಾಮಿ.......

- Kalmesh Badiger

09 Sep 2020, 08:34 am
Download App from Playstore: