ಊಟ
ಬದಲಾಯ್ತು ಜಗವೆಲ್ಲಾ
ಮರುಳ ಆಯ್ತು ಜಗವೆಲ್ಲಾ
ಮೊದಲಿದ್ದ ಅಡುಗೆಮನೆ
ಇನ್ನೇಲ್ಲಿ ಕಾಣುವುದು //
ಸಜ್ಜೆ ಜೋಳದ ರೊಟ್ಟಿ
ಕುಟ್ಟಿ ಮಾಡಿದ ಹುಗ್ಗಿ
ಕರಿದ ಕರಿಗಡಬು ಹೋಳಿಗೆ
ಇನ್ನೇಲ್ಲಿ ದೊರೆಯುವುದು //
ನಾಜೂಕದ ಲೋಕದಲಿ
ನಾಸ್ಟಾ ಎಂಬುದೇ ಊಟ
ನಾಲ್ಕು ತುತ್ತಿಂದರೆ ಆಯ್ತು
ಮುಂದೇನು ಮಾಡುವುದು //
ರಾಗಿ ಮುದ್ದೆ ಯು ಇಲ್ಲಾ
ಗಸ ಗಸೆ ಪಾಯಸ ವಿಲ್ಲ
ಮಣೆಮೇಲೆ ಕುತ್ಗೊಂಡು
ಊಟ ಮಾಡಿದ ಕಾಣೆ //
ಇಲ್ಲಿರುವುದು ಒಂದೇ
ಹಲ್ಲಿರದವರು ತಿನ್ನುವ
ಅಣ್ಣದಲಿ ಮಾಡಿರುವ
ಬಣ್ಣ ಬಣ್ಣದ ಊಟ //
ಕಲ್ಮೇಶ ಬಡಿಗೇರ
9743539657
....ಬಾದಾಮಿ.......
- Kalmesh Badiger
09 Sep 2020, 09:06 am
Download App from Playstore: