ದೇವರ ಕೆರೆ
ಊರಲ್ಲಿ ತೊಟ್ಟು ನೀರಿಲ್ಲಾ
ಕೆರೆ ಬಾವಿ ಗಳೆಲ್ಲ ಬತ್ತೊಯ್ತು
ಎತ್ತ ನೋಡಿದರತ್ತ ಆಕ್ರಂದನ
ಸುತ್ತೆಲ್ಲ ಸುಡುಗಾಡು ಮೌನ //
ಗುಳೆ ಹೋಯ್ತು ಜನವೇಲ್ಲ
ಹೂಳೆತ್ತುವವರಾರೂ ಇಲ್ಲ
ಹಳೆ ಗುಡಿಸಲ ಒಳಗೆಲ್ಲಾ
ಹಸುಳೆಗಳ ಆಹ್ಹಾಕಾರ //
ಊರ ಕಲ್ಲಪ್ಪ ಸಾಹುಕಾರ
ಕಲ್ಲುಗಳನ್ನೆಲ್ಲಿಂದ ತರಲೆಂದ
ಕೆರೆ ಬಾವಿ ಗಳ ಕಟ್ಟಿಸಲು
ತಲೆ ಕೂದಲೆಲ್ಲ ಕೆರೆದುಕೊಂಡು //
ಊರಾಗಿರೋ ವೆಂಕಟೇಶ
ಉರ್ಹೊರಗಿರೋ ಹನಮಂತ
ಎಲ್ಲಾ ದೇವರ ಕಲ್ಲು ಕಿತ್ತು ತಂದ
ಅಂದ ಚೆಂದದ ಕೆರಗೆ ಮೂರ್ತವಿಟ್ಟ //
ದೇವರ ಕೇರೆಯಂದು ಅದಕ್ಕೆ
ನಾಮಕರಣ ಮಾಡಿ ಬಿಟ್ಟಾ
ದೇವರ ಮನೆಗಳನ್ನೇಲ್ಲ ಒಡೆದು
ದೇವರ ಕೆರೆಯೊಂದು ಕಟ್ಟಿಬಿಟ್ಟ //
ದೇವರ ದು ಎಂತಾ ಪಾಪ
ಅನ್ಯರಿಗೆ ಕಲ್ಲು ಕೊಟ್ಟು
ಅಂದಿನಿಂದ ಇಂದಿನ ತನಕ
ಬಿಸಿಲಲ್ಲಿ ಮಲಗಿ ಬಿಟ್ಟಾ //
.. ಕಲ್ಮೇಶ ಬಡಿಗೇರ
9743539657
..,..ಬಾದಾಮಿ......
- Kalmesh Badiger
09 Sep 2020, 10:23 am
Download App from Playstore: