ಪಿತೃ ಪಕ್ಷ

ಇದ್ದಾಗ ಹೊಟ್ಟೆಗೆ ಊಟ
ಮೈ ತುಂಬಾ ಬಟ್ಟೆ ಕೊಡದೇ
ವರ್ಷಕ್ಕೊಮ್ಮೆ ಬರುವ
ಪಿತೃ ಪಕ್ಷಕ್ಕೆ ಗುಂಡು ತುಂಡು
ಬಟ್ಟೆ ಬರಿ ತಂದಿಟ್ಟು ಪೂಜಿಸಿದರೆ
ಸತ್ತವರು ಮತ್ತೆ ಎದ್ದು ಬರುವರೇ
ಬಂದು ತಿನ್ನುವರೇ ಗುಂಡು ತುಂಡು

ಗುಂಡು ತುಂಡು ತಿಂದು ತೆಗುತ್ತಾ
ಬಟ್ಟೆ ಬರಿ ತೊಟ್ಟು ಸಂಭ್ರಮಿಸುತ್ತಾ
ಬಂಧು ಬಾಂಧವರ ಕರೆದು
ಪಿತೃ ಪಕ್ಷವಾ ಮಾಡುವರು ಸತ್ತವರಿಗಾಗಿ
ಪಿತೃ ಪಕ್ಷ ಸತ್ತವರಿಗಾಗಿ
ಗುಂಡು ತುಂಡು ನಮ್ಮಗಾಗಿ
ಮೌನಾಚರಣೆ ಬದಲು
ಸಂಭ್ರಮಾಚರಣೆ ಮಾಡುವರಯ್ಯ

- ರಾಜು ಹಾಸನ

14 Sep 2020, 12:11 am
Download App from Playstore: