ಓ ಗೆಳೆಯ
ಓ ಗೆಳೆಯ
ಮಾಮೂಲಿ ಪ್ರೀತಿ ಮಾಡಿ
ನೊಂದು, ಬೆಂದು, ಸೋತು
ನಿಂತಿರುವೆ ನಾನಿಲ್ಲಿ.
ಹರಿಯುತ್ತಿರುವ ನೀರ ಮದ್ಯೆ
ಗಾಡಿ ಚಲಿಸಿದಂತಾಗಿದೆ
ನನ್ನ ಜೀವನ ಇದೀಗಿಲ್ಲಿ.
ಶಾಲೆಯಲ್ಲಿ ಗುರುಗಳು ನನಗೆ ಬೋಧಿಸಿದರೂ,
ರೋಸಿಸಿದರೂ
ವಿದ್ಯೆಯೂ ಎನ್ನ ಬೆನ್ನತ್ತಲಿಲ್ಲ.
ಆದರೆ ಇಂದು ನಿಂತ ನೀರಿನ ಮೇಲೆ
ಎಂಟಾಣಿ ನಾಣ್ಯ ತೇಲಿಸುವಂತಾಗಿದೆ
ನನ್ನ ಈ ಜೀವನ.
ಒಂದೊಳ್ಳೆ ಉಪಾಯವ ನೀ ಹುಡುಕಿ ಎನ್ನ ಉದ್ದಾರ ಮಾಡು ಬಾ ಗೆಳೆಯ
ಓ ನನ್ನ ಜೀವದ ಗೆಳೆಯ.
*-ಪೃಥ್ವಿ ಶಶಾಂಕ್*
*ಬೊಮ್ಮಶೆಟ್ಟಹಳ್ಳಿ*
- pruthvi shashank
17 Sep 2020, 06:03 pm
Download App from Playstore: