ದೇವರು ಯಾರು
ದೇವರಿಂದ ನಾವಲ್ಲ
ನಮ್ಮಿಂದ ದೇವರು
ನಮ್ಮ ಸೃಷ್ಟಿಕರ್ತ ದೇವರಲ್ಲ
ದೇವರ ಸೃಷ್ಟಿಕರ್ತರು ನಾವು
ದೇವರು ನಮ್ಮನ್ನು ರಕ್ಷಿಸುವುದಿಲ್ಲ
ನಾವೇ ದೇವರನ್ನು ರಕ್ಷಿಸುವುದು
ಜನರಿಂದ ಹುಟ್ಟಿ
ಜನರಿಂದಲೇ ರಕ್ಷಣೆ ಪಡೆಯುವ
ಹಾದಿ ಬೀದಿಯಲ್ಲಿ ಬಿದ್ದಿರುವ
ಕಲ್ಲಿನ ಚೂರು ದೇವರಾಗುವುದೇ
ದೇವರಿಗಾಗಿ
ಹಬ್ಬ ಹರಿದಿನವೆಂದು
ಅನ್ನ ನೀರು ತಿನ್ನದೆ
ಉಪವಾಸ ಮಾಡುವ ದಡ್ಡ ಜನ
ಒಂದು ಕ್ಷಣ ಗಾಳಿ ಸೇವಿಸದೇ
ಮಾಡಲಿ ಉಪವಾಸ
ಮುರ್ಚೆ ಬಂದು ಬಿದ್ದಾರೆ
ಜನ ವೈದ್ಯರು ಬರುವರೆ ವಿನಃ
ಹಾದಿ ಬೀದಿಯಲ್ಲಿ ಬಿದ್ದರುವ
ಕಲ್ಲು ದೇವರಲ್ಲ
- ರಾಜು ಹಾಸನ
18 Sep 2020, 12:45 am
Download App from Playstore: