ಎಳ್ಳು ನೀರು

ದೇವರ ಭಾಷೆ
ಬ್ರಹ್ಮ ಲಿಪಿ ಸಂಸ್ಕೃತವಾದರೆ
ನಾವು ಆಡುವ ಭಾಷೆ
ಕನ್ನಡ ಕನ್ನಡ ಭಾಷೆ
ಹಾಗಾದರೆ ಹೇಂಗೆ ತಿಳಿಯುವುದು
ದೇವರಿಗೆ ನಮ್ಮ ಭಾಷೆ
ಅದಕ್ಕಾಗಿಯೇ ಇಟ್ಟುಕೊಂಡಿರಬಹುದೇ
ದೇವರು ದಲ್ಲಾಳಿ ಪೂಜಾರಿನ್ನ

ಸಂಸ್ಕೃತವೇ ತಿಳಿಯಾದ ನಮಗೆ
ಸಂಸ್ಕೃತ ಭಾಷೆಯಲ್ಲಿ
ಪೂಜಾರಿ ಮಂತ್ರ ಪಠಿಸಿ
ದೇವರಿಗೆ ಪೂಜೆ ಸಲ್ಲಿಸಿದರೆ
ಯಾರ ಒಳಿತಿಗಾಗಿ
ಯಾವ ಮಂತ್ರ ಪಠಿಸಿದನೆಂದು
ಹೇಂಗೆ ತಿಳಿಯಲು ಸಾಧ್ಯ
ಹೇಂಗೆ ನಂಬಲು ಸಾಧ್ಯ

ದೇವರ ಪೂಜೆಗೆ ಕೊಡುವೆವು
ಹಣ್ಣು ಕಾಯಿ
ತಿಂದು ತೇಗುವುದು ಪೂಜಾರಿ
ಭಕ್ತರ ಕಿವಿಗೆ ಇಡುವರು
ಚೆಂಡು ಹೂವು
ಭಕ್ತರ ಬಾಯಿಗೆ ಬಿಡುವರು
ಎಳ್ಳು ನೀರು

ದೇವಸ್ಥಾನಕ್ಕೆ ಹೋದರೆ
ತುಂಬಿ ತುಳುಕುವುದು
ಪೂಜಾರಿ ಜೋಳಿಗೆ
ಖಾಲಿಯಾಗುವುದು
ಭಕ್ತರ ತಲೆ ಮತ್ತು ಜೇಬು

- ರಾಜು ಹಾಸನ

19 Sep 2020, 12:13 am
Download App from Playstore: