ಮಡಿ ಮೈಲಿಗೆ
ಸತ್ತ ವ್ಯಕ್ತಿಯ ಮುಟ್ಟಿದರೆ
ಮಡಿ ಮೈಲಿಗೆ ಎನ್ನುವ ಜನರಿಗೆ
ಸತ್ತ ಪ್ರಾಣಿಯ ಮಾಂಸವೆಂದು
ತಿನ್ನುವಾಗ ಮಡಿ ಮೈಲಿಗೆ
ಆಗುವುದಿಲ್ಲವೇ
ಸತ್ತವರ ಮುಟ್ಟಿದರೆ
ಮಡಿ ಮೈಲಿಗೆಯೆಂದು
ತಲೆ ಮೇಲೆ ತಣ್ಣೀರು
ಸುರಿದುಕೋಳ್ಳುವ ಜನರು
ಸತ್ತ ಪ್ರಾಣಿಯ ತಿಂದಾಗ
ಹೊಟ್ಟೆಗೆ ಬೆಂಕಿ ಸುರಿದುಕೋಳ್ಳುವರೇ
ಮಡಿ ಮೈಲಿಗೆಯೆಂದು
ದೇಹಕ್ಕೆ ಬಟ್ಟೆ ಸುತ್ತಿಕೊಂಡು
ತಲೆ ಮೇಲೆ ತಣ್ಣೀರು
ಸುರಿದುಕೊಂಡರೇನು ಬಂತು
ಮನಸ್ಸಿನಲ್ಲಿ ಒಳ್ಳೆಯ ಯೋಚನೆ
ಆಲೋಚನಗಳು ಇಲ್ಲದಿದ್ದ ಮೇಲೆ
- ರಾಜು ಹಾಸನ
20 Sep 2020, 12:52 am
Download App from Playstore: