ಪ್ರೀತಿಯ ವೇದಾಂತ

ಪ್ರೀತಿ ಗೀತಿ ಅಂತ ಸುಂದರ ಹುಡುರ್ಗಿಂದೆ ನೀನು ಹೋಗಬೇಡ ಮಗ
ನೀನ್ ಹೋಗ್ ಹೋಗ್ ಹೋಗಾಬೇಡಾ ಸುಂದರ ಹುಡುಗೀರ್ಗೆ ಇರ್ತಾವೆ ಆಯ್ಕೆ ನೂರೆಂಟು
ಅದರಲ್ಲಿ ಕೆಲ ಹುಡುಗೀರ್ಗೆ ಕಾಗೆ ಹಾರ್ಸೋ ಚಾಳಿಯಂಟೂ ಉಷಾರು
ಉಷ್ ಉಷ್ ಉಷಾರು
ಇಲ್ಲಾಂದ್ರೆ ಜೀವನ ಬರೀ ಬೇಜಾರು

ಅವಳ ಪ್ರೀತಿಗಾಗಿ ಬಿದ್ದು ಸಾಯೋ ಹುಡುಗರು ಹಲವಾರು
ಅದರಲ್ಲಿ ನೀನು ಒಬ್ಬ
ತಿಳ್ಕೋ ಮೊದಲು ತಿಳ್ಕೊ ಗುರು
ಇಲ್ಲಾಂದ್ರೆ ಆಮೇಲೆ ಜೀವ್ನ ಬರೀ ಬೇಜಾರು ಬರ್ ಬರ್
ಬರೀ ಬೇಜಾರು

ಅವಳು ನಿನ್ನ ಕಡೆ ನೋಡಿ ಅವಳು ನಿನ್ನ ಕಡೆ ನೋಡಿ ನಕ್ಕಳು ಅಂತಾ
ನೀನು ಕ್ಲಾಸಿಗೆ ಚಕ್ಕರಾಕಿ ಅವಳಿಂದೇ
ಸುತ್ತ ಬೇಡ ಮಗ
ಸುತ್ ಸುತ್ ಸುತ್ತಾ ಬೇಡಾ ಮಗ

ನಿನ್ನ ಮನಸ್ಸಲಿ ಅವಳ ಬಿಂಬಾನ
ಹಚ್ಛೆ ಹಾಕಿ
ನಿನ್ನ ಹೃದಯಕೆ ಅವಳ ಹೆಸರನ
ಹೇಳೋದನ್ನ ಜಪಿಸೋದನ್ನ
ಕಲಿಸ್ಬೇಡ ಮಗ
ಕಲ್ ಕಲ್ ಕಲಿಸ್ಬೇಡಾ ಮಗ

ಅವಳನ್ನು ಮೆಚ್ಚಿದ ತಪ್ಪಿಗೆ
ನೆನಪುಗಳು
ಚುಚ್ಚೀ ಚುಚ್ಚಿ ಹುಚ್ಚ ನಾಗೋತ್ತೀಯಾ ಮಗ
ಹುಚ್ಚ್ ಹುಚ್ಚ್ ನಾಗೋತ್ತೀಯಾ

ಮನಸ್ಸು ಯುದ್ಧರಣರಂಗವಾಗಿ
ಅವಳ ನೆನಪಿನ ದಾಳಿಯ ನೀನು ಎದುರಿಸದೆ ಸೋತೋಗ್ತಿಯ
ದುಶ್ಚಟಗಳಿಗೆ ದಾಸನಾಗೋಗ್ತಿಯ

ಅಳೋದಕೂ ಆಗಲ್ಲ
ನಗೋದಕೂ ಮನಸ್ಸಿಲ್ಲ ಅನ್ನೊಂಗಾಗಿ
ಸತ್ತೋಗ್ತಿಯಾ ಮಗ
ನೀ ಸತ್ ಸತ್ ಸತ್ತೋಗ್ತೀಯ

ನಿನ್ನನು ಮರೆತು ಬಿಟ್ಟು ಇನ್ನೊಬ್ಬನ ಮದುವೆಯಾಗಿ
ಸಂಸಾರ ಮಾಡ್ತಾಳೆ
ಮಕ್ಕಳನ್ನ ಹೆತ್ತು ಸುಖ್ವಾಗಿರ್ತಾಳೆ
ಅಪ್ಪಿತಪ್ಪಿ ನಿನ್ನೆದುರು ಅವಳು ಬಂದರೆ
ಅವಳನ್ನ ತಲೆ ಎತ್ತಿ ನೋಡಿದೆ ಬೇಗ ಜಾಗ ಖಾಲಿ ಮಾಡು
ಇಲ್ಲಾಂದ್ರೆ ಇಲ್ಲ್ ಇಲ್ಲ್ ಇಲ್ಲಾಂದ್ರೆ
ನೀನು ನನ್ನನ್ನ ಮರೆತೂ ಬಿಟ್ಟು
ಬೇರೆ ಹುಡುಗೀನ ಮದುವೆಯಾಗಿ
ಸುಖ್ವಾಗಿರು ಅಂತಾಳೆ
ಸುಂಸುಮ್ನೆ ಹೃದಯಕ್ಕೆ ಕಷ್ಟ ಕೊಡುತ್ತಾಳೆ

"ಯಾಕೆ ಬೇಕು ಮಗ ನಿಂಗೆ ಇಂಥ ಪ್ರೀತಿಯಿಂದ ಹೋಗೋ ಆಳು ಜೀವ್ನ"

ನಿನ್ನನ್ನು ಪ್ರೀತಿ ಮಾಡೋ ಹುಡುಗಿಯನ್ನ
ನೀನು ಮರೆಯಬೇಡ
ಮರೆತು ಕೊರಗಬೇಡ
ಮೊದಲು ನಿನ್ನಿಂದೆ ಬರುವ
ಹುಡುಗೀನ ಇಷ್ಟಪಡು
ತುಂಬಾ ಪ್ರೀತಿ ಮಾಡು
ನೀನು ಚೆನ್ನಾಗಿರ್ತಿಯಾ
ನೀನು ಚೆನ್ ಚನ್ ಚನ್ನಾಗಿರ್ತಿಯಾ

ಅವಳಿಗೆ ನೀನೇ ರಾಜ ಆಗ್ತೀಯಾ
ಅವಳಿಗೆ ನೀನೆ ಎಲ್ಲ ಅಂದಮೇಲೆ
ನೀನು ಪ್ರೀತಿಯಲ್ಲಿ ಸೋಲೆ ಮಾತೇ ಬರಲ್ಲ
ನೀನು ಇನ್ ಸೋಲೋ ಮಾತೆ ಇಲ್ಲ
ಮಗ ನಿಂಗೆ ಉಳಿಯೋದೊಂದೆ ಈಗ
ಧರೆಯಲಿ ಸ್ವರ್ಗ ಅನ್ನೋ
ಮಾತು ಎಂದಿಗೂ ಸುಳ್ಳಾಗಲ್ಲ
ಸುಖ್ ಸುಖ್ ಸುಖ್ ವಾಗಿರು ಮಗ

- HarishKumarm

20 Sep 2020, 01:51 pm
Download App from Playstore: