ಎಲ್ಲಾ ಮಾಯಾ
ಈಡಿ ಜಗತ್ತನ್ನೆ ಸೃಷ್ಟಿಸಬಲ್ಲ
ನರ ಮಾನವ ಕಾಯುವನು ನಿಮ್ಮ ತಲೆ
ಒಂದು ಕಡ್ಡಿಯನ್ನು ಸೃಷ್ಟಿಸಲಾಗದ
ಕಲ್ಲ ಕಂಬ ಕಾಯುವುದೇ ನಿಮ್ಮ ತಲೆಯ
ಹೋಗದಿರಿ ಗುಡಿ ಗುಂಡತರಗಳಿಗೆ
ಸುತ್ತದಿರಿ ಕಲ್ಲು ಕಂಬವ
ಸುತ್ತಿದಷ್ಟ ಸವೆಯುವುದು ನಿಮ್ಮ ಪಾದ
ಆಳಾಗುವುದು ನಿಮ್ಮ ಮನಸ್ಸು
ಖರ್ಚಾಗುವುದು ನಿಮ್ಮ ಸಮಯ
ಕರಗದೆ ಇರುವುದು ಕಲ್ಲು ಕಂಬ
ಸರ್ವಾಂತರ್ಯಾಮಿ
ದೇವರು ಬರುವನು ನಿಮ್ಮಲ್ಲಿಗೆ
ತರುವನು ಲೇಖನಿ ಪುಸ್ತಕ
ಬರೆದುಕೊಳ್ಳುವನು ನಿಮ್ಮ ಗೋಳು
ನೀಡುವನು ಪರಿಹಾರ
ಕೇಳಲು ನಿವು ಇರುವುದಿಲ್ಲ
ಹೇಳಲು ಅವನೇ ಇರುವುದಿಲ್ಲ
ನಿವು ಮಾಯಾ ಅವನು ಮಾಯಾ
ಎಲ್ಲವೂ ಮಾಯಾ ಮಾಯಾ
- ರಾಜು ಹಾಸನ
21 Sep 2020, 12:24 am
Download App from Playstore: