ನಂದಾದೀಪ

ಹೆಣ್ಣುನ್ನು ದೇವರೆಂದು
‌ ‌ ಗೌರವಿಸುವ ಈ ಸಮಾಜದಲ್ಲಿ
ಹೆಣ್ಣಿಗಿಲ್ಲ ಸ್ವಾತಂತ್ರ್ಯ
‌‌ ಬಂಧಿಯಾಗಿರುವಳು
ನಾಲ್ಕು ಗೋಡೆಗಳ ನಡುವೆ
ಪಂಜರದ ಹಕ್ಕಿಯಾಗಿ

ಹೆಣ್ಣು ಅಬಲೆಯಲ್ಲ ಸಂಸಾರದ ಕಣ್ಣು
ಮನುಕುಲದ ನಂದಾದೀಪ
ಹೆಣ್ಣು ಏಂಕಾಗಿಯಾದರು
ಸಾಗಿಸುವಳು ಸಂಸಾರದ ಹೋರೆ
ಆಗಸದ ಸೂರ್ಯ ಚಂದ್ರರಂತೆ

ಹೆಣ್ಣು ಬಾವಿಯ ಕಪ್ಪೆಯೆಂದು ಬಿಂಬಿಸುವ
ಈ ಕೆಟ್ಟ ಸಮಾಜ ತಿಳಿಯಬೇಕು
ಹೆಣ್ಣು ಬಾವಿಯ ಕಪ್ಪೆಯಲ್ಲ
ಮನುಕುಲದ ನಂದಾದೀಪವೆಂದು

- ರಾಜು ಹಾಸನ

21 Sep 2020, 11:42 am
Download App from Playstore: