ಆರೋಗ್ಯವೇ ಭಾಗ್ಯ

ನಾ ಕುಡುಕ ಕುಡುಕ
ಒಂದು ನೈಂಟಿ ಬಿಟ್ಟರೆ
ಹಾರುಡುವೆ ಹಕ್ಕಿಯಂತೆ
ತೇಲಾಡುವೆ ಮೋಡದಂತೆ
ವಾಲಾಡುವೆ ಅಡಿಕೆ ಮರದಂತೆ

ಕುಡಿದರೆ ನನಗೆ ನಾನೇ
ರಾಜಾದಿ ರಾಜ ಶೂರದಿ ಶೂರ
ಆಜ್ಞೆ ಹೊರಡಿಸಿದೆ ಉಪ್ಪಿನಕಾಯಿ ಕ್ವಾಟರ್ ಗೆ
ಕುಡಿದು ಕೂಗಿದರು ಮಿತ್ರರು
ಬೊಪ್ಪರಕ್ ಬೊಪ್ಪರಕ್

ಬರುವರು ಬಂಧು ಮಿತ್ರರು
ಬಂದು ಕಟ್ಟುವರು ಚಟ್ಟಾ
ಹಾಕುವರು ಮನೆ ಮುಂದೆ ಹೋಗೆ
ಗೋಳಾಡುವರು ಮನೆ ಮಂದಿ
ಬಾರಿಸುವರು ಶಂಖು ಜಾಗಟೆ
ನೆಡೆಸುವರು ಊರ ಮೇರವಣಿಗೆ
ತಂದು ಮಲಗಿಸುವರು
ಆರಾಡಿ ಮೂರಡಿ ಗುಂಡಿಯಲ್ಲಿ

ಹೆಂಡ ಮುಟ್ಟದಿರೆ ಕಟ್ಟುವರು ಚಟ್ಟಾ ಪಟ್ಟ
ಸೇರುವಿರಿ ಆರಾಡಿ ಮೂರಡಿ ಗುಂಡಿ
ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ

- ರಾಜು ಹಾಸನ

21 Sep 2020, 02:17 pm
Download App from Playstore: