ಬಂಡಾಯ

ಭೂ ಲೋಕದ ನರ ಮಾನವರು
ಸೇವಿಸುವುದು ಸಸ್ಯ ಆಹಾರ
ಮಾಂಸಾಹಾರ ಮಿಶ್ರ ಆಹಾರವಾದರೆ
ದೇವಾ ಲೋಕದ ದೈವಾ ಮಾನವರು
ಸೇವಿಸುವುದ್ದದಾರು ಏನು?

ಯಾವ ದೇವಾ ಲೋಕವು ಇಲ್ಲ
ಯಾವ ದೇವರು ಇಲ್ಲ
ಇರುವುದು ಒಂದೇ ಲೋಕ ಭೂ ಲೋಕ
ಭೂ ಲೋಕದ ಒಡೆಯ ನರ ಮಾನವ

ದೇವರಿದ್ದಾನೆಂದು ನಂಬಿಸುವವನು
‌ ಬಲು ಕಿಲಾಡಿ
ನಂಬಿ ಮೋಸ ಹೋಗುವವನು
ಹಳ್ಳಕ್ಕೆ ಬಿದ್ದ ಹರಕೆ ಕುರಿ

- ರಾಜು ಹಾಸನ

21 Sep 2020, 03:28 pm
Download App from Playstore: