ನನ್ನ ದೇವರು

ಮರೆಯೋದುಂಟೆ ಮರೆತು
ಬದುಕೊದುಂಟೆ ಕೈ ತುತ್ತು ತಿನ್ನಿಸಿ
ಲಾಲನೆ ಪಾಲನೆ ಮಾಡಿ
ತನ್ನ ಕಷ್ಟಾ ಸುಖವ ಪಕ್ಕಕ್ಕಿಟ್ಟು
ಸಾಕಿದ ತಾಯಿಯ ತಾಯಿ ಪ್ರೀತಿಯ

ನಾ ರಾಜನಲ್ಲದಿದ್ದರೂ
ರಾಜ ಮಹಾರಾಜನಂತೆ ಸಾಕಿದಳು
ಅವಳಿಗೆ ನಾನೇ ರಾಜ ಮಹಾರಾಜ
ಅವಳೆ ನನಗೆ ದೇವತೆ ಜಗದ್ಮಾತೆ
ಅವಳ ತ್ಯಾಗ ಪ್ರೀತಿಯ ಮುಂದೆ
ನಾ ಸಣ್ಣವ ನಾ ಚಿಕ್ಕವ

ಕೈ ತುತ್ತು ತಿನ್ನಿಸಿ ಸಾಕಿ ಸಲಹಿದ
ತಾಯಿಯ ಸೇವೆ ಮಾಡದ ಕೈಗಳು
ಇದ್ದರೇನು ಹೋದರೇನು
ತಾಯಿಯ ಸುಖ ದುಃಖ ಆಲಿಸಿದ
ಕಿವಿಗಳು ಕೇಳಿಸಿದರೇನು ಕೀವುಡಾದರೇನು

ಕಟ್ಟಿಕೊಂಡವಳ ಮುಂದೆ
ಕೋಲ್ಲದಿರಿ ಚುಚ್ಚು ಮಾತುಗಳಿಂದ
ಕಾಲ ಕಸವಾಗಿ ಕಾಣದಿರಿ
ಕೊರಗುವುದು ತಾಯಿ ಜೀವಾ
ಗೋಳಾಡುವುದು ತಾಯಿ ಹೃದಯ
ಮರೆಯದಿರಿ ಅವಳಿಂದಲೇ ನಮ್ಮ ಜನ್ಮ
ಅವಳೆ ನನ್ನ ಜೀವಾ ಅವಳೆ ನನ್ನ ದೇವರು

- ರಾಜು ಹಾಸನ

21 Sep 2020, 11:50 pm
Download App from Playstore: