ಸುಂದರ ಕ್ಷಣ
ತಂಪಾದ ಗಾಳಿಗೆ ಮೈಯೊಡ್ಡಿ
ಮಧುರ ಸ್ಪರ್ಶವ ಆನಂದಿಸುತ್ತಾ
ಹಾಗೇ ಸುಮ್ಮನೆ ನೆಡೆದಾಡುವಾಸೆ
ಬಲು ಹಿಂಪದ
ಹಕ್ಕಿಗಳ ಗಾನ ಆಲಿಸುತ್ತಾ
ಹಾಗೇ ಮೈ ಮರೆಯುವಾಸೆ
ಬಳುಕುತ್ತಾ ಓಡುವ
ನದಿಯ ಜೋತೆ ಓಡಾಡುವಾಸೆ
ಹಚ್ಚ ಹಸಿರಿನ ವನಸಿರಿಯ
ಕಣ್ಣು ತುಂಬಿಕೊಳ್ಳುವಾಸೆ
ಗರಿ ಬಿಚ್ಚಿ ಕುಣಿಯುವ
ನವಿಲಿನ ಜೋತೆ ಹೆಜ್ಜೆ ಹಾಕುವಾಸೆ
ಖುಷಿ ಮಂದಹಾಸದ
ತೊಟ್ಟಿಲು ಪ್ರಕೃತಿ ವನಸಿರಿಯಲ್ಲಿ
ಬಿದ್ದು ಒದ್ದಾಡುವಾಸೆ
ಪ್ರಕೃತಿ ರಕ್ಷಿಸಿದರೆ ನಾಡು ಸುರಕ್ಷಿತ
- ರಾಜು ಹಾಸನ
22 Sep 2020, 08:00 pm
Download App from Playstore: