ಮನ ಮಿಡಿಯುವ ಕಥೆ

ಇಂದು ಮುಳುಗಿ ನಾಳೆ ಉದಯಿಸುವ
ಸೂರ್ಯ ಚಂದ್ರರನ್ನ ನೋಡ್ತಿವೋ ಗೋತ್ತಿಲ್ಲ
ಜೀವನವೆಂಬುದು ಕ್ಷಣಿಕ
ಯಾವಾಗ ಹೇಂಗೆ ಎಲ್ಲಿ ಯಾಕ್
ಹೋಗುತ್ತೆ ಅಂತ ಯಾರಿಗು ಏನು ಗೋತ್ತಿಲ್ಲ
ಆದರೂ ನಾವು ನಮ್ಮವರಿಂದ ದೂರಾಗಿ
ಮಣ್ಣಲ್ಲಿ ಮಣ್ಣಾಗಿ ಎದೆಯ ಮೇಲೆ
ಮಣ್ಣಿನ ಗೋರಿ ಕಟ್ಟಿಕೊಂಡು ಮಲಗಿದ್ದರೂ
ಆಗಾಗ ಬಂದು ಕೂಗಿ ಕರೆಯುವಳು
ಕರುಳು ಬಳ್ಳಿಯ ಕಂದನ ನೆನೆದು
ಒರೆಸುವಳು ಕಂದನ ಗೋರಿಯ
ತನ್ನ ಕಣ್ಣೀರ ಮಳೆಯ ಸುರಿಸಿ
ಹೊವಿನ ಮಾಲೆಯ ಶೃಂಗಾರ ಮಾಡಿ
ತಿಂಡಿ ತಿನಿಸುಗಳನ್ನು ತನ್ನ ಸೇರಗಲ್ಲಿ
ಕಟ್ಟಿ ತಂದು ಗೋಳಾಡುವಳು
ಮನ ಮಿಡಿಯುವಂತೆ ಕೂಗಿ ಕರೆಯುತ್ತಾ
ಇದೆ ಅಲ್ಲವೇ ಕರುಳ ಬಳ್ಳಿಯ ಸಂಬಂಧ
ಅದಕ್ಕೆ ಹೇಳುವುದು ತಾಯಿಯೇ ದೇವರೆಂದು

- ರಾಜು ಹಾಸನ

23 Sep 2020, 12:12 am
Download App from Playstore: