ಕಾಲದ ಕೈ ಗೊಂಬೆ
ಇದು ಯಾಂತ ಲೋಕವಯ್ಯಾ
ಯಾರು ಬಲ್ಲವರಿಲ್ಲ ಯಾರು ಕಂಡಿಯಾರಿಲ್ಲ
ಈ ಭೂ ಲೋಕದ ನಾಟಕವ
ಮನುಜನ ಗೊಂಬೆಯಾಟವಾ
ಒಬ್ಬರ ಕಂಡರೆ ಒಬ್ಬರಿಗೆ ಆಗುವುದಿಲ್ಲ
ಕಂಡಾಗ ನಗು ನಗುತ್ತಾ ನುಡಿಯುವರು
ಬೆಲ್ಲ ತುಪ್ಪದ ಮಾತು
ಮನದಲ್ಲಿ ಹಾಗೆಯ ತುಂಬಿಕೊಂಡು
ಕಾಲಕ್ಕೆ ತಕ್ಕಂತೆ ನಟಿಸಿ ನರ್ತನ ಮಾಡುವರು
ಬಣ್ಣ ಬಣ್ಣದ ಮುಖವಾಡ ಧರಿಸಿ
ಇಲ್ಲಿ ಯಾರೂ ಯಾರ ಕೈ ಗೊಂಬೆಯಲ್ಲ
ಯಾಲ್ಲರು ಕಾಲದ ಕೈ ಗೊಂಬೆಯಾಗಿರುವರಯ್ಯ
- ರಾಜು ಹಾಸನ
23 Sep 2020, 11:33 am
Download App from Playstore: