ಪ್ರೇಮ ರೋಧನೇ

ಬೇಡ ಮಗ ಬೇಡ
ಈ ಎಣ್ಣೆ ಸಿಗರೇಟು ಸಹವಾಸ
ಬಿಟ್ಟು ಬಿಡು ಮಗ ಬಿಟ್ಟು ಬಿಡು
ಈ ಹೆಂಡ ಸಾರಾಯಿ ಕುಡಿಯೋದು
ಅವಳ ನೆನಪು ಮರೆತು
ಒಮ್ಮೆಲೇ ಅತ್ತು ಬಿಡು ನೀ
ಜೋರಾಗಿ ನಕ್ಕು ಬಿಡು ನೀ
ಹೋಗ್ಬೇಡ ಮಗ ಹೋಗ್ಬೇಡ
ನೀ ಅವಳ ಹಿಂದೆ ಹಿಂದೆ
ಹೋಗಿ ಸಾಯಬೇಡ
ಅಳಬೇಡ ಮಗ ಅಳಬೇಡ
ನೀ ಅತ್ತು ಅತ್ತು ಆಳಾಗಬೇಡ
ಸತ್ತು ಸಮಾಧಿಯಾಗಬೇಡ
ನಗು ನಗುತ್ತಾ ಬಾಳು
ಪ್ರೀತಿಸಿ ಹೋದವಳ ನೆನಪಲ್ಲಿ

- ರಾಜು ಹಾಸನ

23 Sep 2020, 04:39 pm
Download App from Playstore: