ಪುಂಗಿ ದಾಸ

ಜಲ ಗಂಡಾಂತರ ವಾಯು ಗಂಡಾಂತರ
ಅಗ್ನಿ ಗಂಡಾಂತರ ಕಾದಿದೆ ನಿಮ್ಮಗೆಂದು
ಬುಡುಬುಡುಕೆ ಬಿಡುವ ಜ್ಯೋತಿಷಿಯೇ
ಒಂದು ದೊಡ್ಡ ಗಂಡಾಂತರ ಈ ಸಮಾಜಕ್ಕೆ

ತರ ತರವಾಗಿ ಪುಂಗಿ ಊದಿ
ಪಂಗನಾಮ ಹಾಕುವ ಪುಂಗಿ ದಾಸನ
ಪುಂಗಿ ತಾಳಕ್ಕೆ ತಕ್ಕಂತೆ ಕುಣಿದು
ಹಳ್ಳಕ್ಕೆ ಬೀಳುವರು ಈ ದಡ್ಡ ಜನರು

ಯಾರ ಕಣ್ಣಿಗೂ ಕಾಣದ ಪೀಡೆ ಪಿಶಾಚಿಗಳು
ಅ ದಿಕ್ಕು ಈ ದಿಕ್ಕಿನಲ್ಲಿವೆಂದು
ಬುರುಡೆ ಬಿಟ್ಟು ನಂಬಿಸಿದ್ದವನೇ
ದೊಡ್ಡ ಪೀಡೆ ಪಿಶಾಚಿ ಈ ಮನುಕುಲಕ್ಕೆ

- ರಾಜು ಹಾಸನ

23 Sep 2020, 11:15 pm
Download App from Playstore: