ಹಾಗೆ ಸುಮ್ಮನೆ
ಯಾರು ಬಲ್ಲವರು ಇಲ್ಲ
ಯಾರು ಹೋಗಿ ಬಂದವರು ಇಲ್ಲ
ಯಾರು ನೋಡಿ ಬಂದವರು ಇಲ್ಲ
ಕಣ್ಣಿಗೆ ಕಾಣದ ಸ್ವರ್ಗ ನರಕಕ್ಕೆ
ಯಾವ ದೇವಾ ಲೋಕವು ಇಲ್ಲ
ಯಾವ ಪಾತಾಳ ಲೋಕವು ಇಲ್ಲ
ಸದ್ಯಕ್ಕೆ ಇರುವುದು ಒಂದೇ ಲೋಕ
ಅದೇ ನಮ್ಮ ನಿಮ್ಮೆಲ್ಲರ ಭೂ ಲೋಕ
ಸ್ವರ್ಗ ನರಕ ಎಲ್ಲಿಯು ಇಲ್ಲ
ಇಲ್ಲಿಯೇ ಇರುವುದು ಎಲ್ಲ
ನಾವು ಇಲ್ಲಿರುವುದು ಸುಮ್ಮನೆ
ಹೋಗಬೇಕು ಎಲ್ಲ ಬಿಟ್ಟು
ಕಾಲ ಬಂದಾಗ ಹಾಗೆ ಸುಮ್ಮನೆ
- ರಾಜು ಹಾಸನ
24 Sep 2020, 02:14 am
Download App from Playstore: