ನನ್ನವಳ ನೆನಪು
ಏ ಚೆಲುವೆಯೇ
ನೀ ಮರೆತು ಬಿಡು ಎಂದಾಕ್ಷಣ
ನಿನ್ನ ಪ್ರೀತಿಯ ನೆನೆದು
ಹಾಗೆ ಸುಮ್ಮನಾಗಲು ಬಿಡುತ್ತಿಲ್ಲ
ಒಂದೊಂದು ಕ್ಷಣಕ್ಕೂ
ನಿನ್ನ ನೆನಪುಗಳು ಬಂದು
ಬಡಿದೆಬ್ಬಿಸಿ ನೆನಪಿಸುವುದು
ನಿನ್ನಲ್ಲಿರುವುದು ನಿನ್ನ ಹೃದಯವಲ್ಲ
ಎಂದಾಕ್ಷಣ ಗಾಬರಿಗೊಂಡು
ಹುಡುಕಿದೆ ಒಂದು ಕ್ಷಣ
ಹುಡುಕಿದರು ಕೈಗೆ ಸಿಗದಂತೆ
ಅಲೆದಾಡುತ್ತಿದ್ದೆ ನಿನ್ನ ಹಿಂದೆ ಹಿಂದೆ
ಬೇಡವೆಂದು ಬೇಡಿಕೊಂಡರು
ಕೇಳುತ್ತಿಲ್ಲ ನನ್ನ ಮಾತು ಈ ಹೃದಯ
ಮುನಿಸುಕೊಂಡು ಓಡುತ್ತಿದೆ
ಅವಳೊಂದಿಗೆ ಅವಳಿರುವಲ್ಲಿಗೆ
ಯಾರಿಗೆ ಹೇಳೋದು
ಈ ಒಂಟಿ ಹೃದಯಾದ ಗೋಳು
- ರಾಜು ಹಾಸನ
24 Sep 2020, 11:43 am
Download App from Playstore: