ಮೂಕ ಪ್ರಾಣಿ
ದೇವರ ಹೆಸರಿನಲ್ಲಿ ಮುಕ್ತಿ ಮೋಕ್ಷಕ್ಕಾಗಿ
ಬಲಿಕೊಟ್ಟು ತಿನ್ನುವರು ಮಾಂಸದ ಎಡೆಯಿಟ್ಟು
ಮಾತು ಬಾರದ ಮೂಕ ಪ್ರಾಣಿಗಳ ಕಡಿದು
ಮುಟ್ಟದಿರುವುದೇ ಮೂಕ ಪ್ರಾಣಿಗಳ ಗೋಳು
ತಟ್ಟದಿರುವುದೇ ಮೂಕ ಪ್ರಾಣಿಗಳ ಶಾಪ
ದೇವರಿಗಾಗಿ ಪ್ರಾಣಿಗಳ ಬಲಿಕೊಡುವ ಬದಲು
ನಿಮ್ಮನ್ನು ನೀವೇ ಬಲಿಕೊಟ್ಟು ನೋಡಿ
ಆಗಲಾದರೂ ತಿಳಿಯುವುದೇನೂ
ನಿಮ್ಮಗೆ ಪ್ರಾಣಿಗಳ ಜೀವದ ಬೆಲೆ
ತಿಳಿದು ಬದುಕೋ ಮನುಜ ಮೂಕ ಪ್ರಾಣಿಗಳ
ಜೀವವು ನಮ್ಮ ಜೀವದ ಹಾಗೆಯೇ
ಯಾವ ದೇವರು ಕೂಡ ಯಾವ ಪುಸ್ತಕದಲ್ಲೂ
ಬರೆದಿಟ್ಟು ಹೋಗಿಲ್ಲ ಮೂಕ ಪ್ರಾಣಿಗಳ
ಕೊಂದು ತಿಂದರೇ ಮೋಕ್ಷ ಫಲಿಸುವುದೆಂದು
ಎಲ್ಲವು ನಮ್ಮ ಭ್ರಮೆಯಾಷ್ಟೆ ತಿಳಿಯೋ ಮನುಜ
ಪ್ರೀತಿಸಿ ಸಂರಕ್ಷಿಸಿ ಮೂಕ ಪ್ರಾಣಿಗಳನ್ನು
- ರಾಜು ಹಾಸನ
24 Sep 2020, 11:27 pm
Download App from Playstore: