ನರ ಮನುಷ್ಯ

ಭೂ ಲೋಕದ ನರ ಮಾನವರು
ಸೇವಿಸುವುದು ಸಸ್ಯ ಆಹಾರ
ಮಾಂಸಾಹಾರ ಮಿಶ್ರ ಆಹಾರವಾದರೆ
ದೇವಾ ಲೋಕದ ದೈವಾ ಮಾನವರು
ಸೇವಿಸುವುದ್ದದಾರು ಏನು
ನರ ಮಾನವ ಇರುವನು ನಮ್ಮ
ನಿಮ್ಮೆಲ್ಲರ ಭೂ ಲೋಕದಲ್ಲಿ
ದೇವರು ಇರುವನು ದೇವಾ ಲೋಕದಲ್ಲಿ
ಹಾಗಾದರೆ ದೇವಾ ಲೋಕಕ್ಕೆ
ಹೋಗಿ ಬಂದವನು ಯಾರಯ್ಯಾ
ಯಾವ ದೇವರು ಇಲ್ಲ
ಯಾವ ದೇವಾ ಲೋಕವು ಇಲ್ಲ
ಇರುವುದೊಂದೇ ಲೋಕ
ಅದೇ ಈ ಭೂ ಲೋಕವಯ್ಯಾ
ಈ ಭೂ ಲೋಕದ ಒಡೆಯ
‌ನರ ಮಾನವ ನಾವೇ ಅಲ್ಲವೇ
ದೇವರಿದ್ದಾನೆಂದು
ನಂಬಿಸುವವನು ಬಲು ಕಿಲಾಡಿ
ನಂಬಿ ಮೋಸ ಹೋಗುವವನು
ಹಳ್ಳಕ್ಕೆ ಬಿದ್ದ ಹರಕೆ ಕುರಿಯಾಗುವನಯ್ಯ
ಮನುಷ್ಯ ಜನ್ಮವೆಂಬುದು
ಅತ್ಯಮೂಲ್ಯವಾದದ್ದು ವ್ಯರ್ಥ ಮಾಡಿದಿರಿ
ಮೂಢನಂಬಿಕೆ ಕಟ್ಟು ಕಥೆಗಳನ್ನು
ನಂಬಿ ಹಾಳಾಗಬೇಡಿ

- ರಾಜು ಹಾಸನ

27 Sep 2020, 07:36 pm
Download App from Playstore: