ಉಸರವಳ್ಳಿ
ದಿನಕ್ಕೊಂದು ಬಣ್ಣ
ಕ್ಷಣಕ್ಕೊಂದು ಬಣ್ಣ
ಬದಲಿಸುವ ಮರದ ಮೇಲಿನ
ನಾಲ್ಕು ಕಾಲಿನ ಪ್ರಾಣಿ
ಉಸರವಳ್ಳಿಯಾದರೆ
ದಿನ ಜನ ಬದಲಾದಂತೆ
ದಿನಕ್ಕೊಂದು ಕ್ಷಣಕ್ಕೊಂದು
ಮಾತಿಗೊಂದು ಬಣ್ಣ ಬದಲಿಸುವ
ಮಣ್ಣಿನ ಮೇಲೆ ನೆಡೆದಾಡುವ
ಎರಡು ಕಾಲಿನ ಪ್ರಾಣಿ
ಉಸರವಳ್ಳಿ ಮನುಷ್ಯನಲ್ಲವೇ
ಕಾಲ ಬದಲಾಗದಿದ್ದರು
ಜನ ಬದಲಾದಂತೆ ಎಲ್ಲಾರು
ಬದಲಾಗುವುದು ಸಹಜ ಆದರೆ
ತಮ್ಮ ಮನಃಸಾಕ್ಷಿಯನ್ನೆ ಕೊಂದು
ಬದಲಾಗುವುದು ಆತ್ಮವಂಚನೆ
ತಮ್ಮಗೆ ತಾವೇ ಮಾಡಿಕೊಂಡ ದ್ರೋಹ
- ರಾಜು ಹಾಸನ
29 Sep 2020, 09:53 am
Download App from Playstore: