ಕುರುಡು ಕಾಂಚಾಣ

ಹಳ್ಳಿ ಹಳ್ಳಿಯಲ್ಲೂ ಹುಳಿ ಹೆಂಡ ತುಂಬಿ
ಬಂಗಾರದ ಭೂಮಿ ಬಾಯ್ತೆರೆದು ಅಳಲು
ಅನ್ನದ ನಾಡಲ್ಲೆಲ್ಲ ಅಕಟಕಟಾ ಎದ್ದಿರಿಲು
ಕುರುಡು ಕಾಂಚಾಣ ಅಲ್ಲಿ ಕುಣಿಯುತ್ತಿತ್ತು //

ಓಟು ನೋಟಿನ ನಡುವ ಮದ್ಯದಂತರದಲ್ಲಿ
ಕೋರ್ಟು ಕಟ್ಟೆಲೆಗಳ ಸುಳ್ಳು ಸತ್ಯಗಳ ಮದ್ಯ
ಸಾಹಿತ್ಯ ಸಂಗೀತ ಪುರಸ್ಕಾರಗಳ ಒಳಗೊಮ್ಮೆ
ಕುರುಡು ಕಾಂಚಾಣ ಅಲ್ಲಿ ಕುಣಿಯುತ್ತಿತ್ತು //

ಸಿರಿವಂತರ ಸೋಕ್ಕಿನಲಿ ಬಡವನ ರಟ್ಟೆಯಲಿ
ಅಧಿಕಾರಿಗಳ ಧರ್ಪದಲಿ ಆಳುಗಳ ಕೊಕ್ಕಿನಲ್ಲಿ
ರಾಜಕಾರಣಿಗಳ ಬೊಕ್ಕಸದಲ್ಲಿ ನಲಿನಲಿದು
ಕುರುಡು ಕಾಂಚಾಣ ಅಲ್ಲಿ ಕುಣಿಯುತ್ತಿತ್ತು //

ಸತ್ತ ಹೆಣಗಳ ಸುಟ್ಟ ಸುಡುಗಾಡು ಬೂದಿಯಲಿ
ಬಚ್ಚಿಟ್ಟ ಬದುಕ ಕದ್ದವರ ಕೈಗಳಲಿ ತೆಲಾಡುತ
ಎಂದೆಂದಿಗೂ ನಾನ್ಯಾರಿಗು ಸೇರಲ್ಲ ಎಂದೇನುತ
ಕುರುಡು ಕಾಂಚಾಣ ಅಲ್ಲಿ ಕುಣಿಯುತ್ತಿತ್ತು //

ಕಾಸಿಂದೆ ಬಿದ್ದೋರು ಕಣ್ಮುಂದೆ ಇದ್ದೋರು
ಸದ್ಗುರುವಿನ ಚರಣದಲಿ ಶಾರಣಾದರೋ
ಇಟ್ಗೊಂಡು ಕಟಗೊಂಡು ಕುಪ್ಪಳಿಸಿ ಕುಣಿದು
ಕಾಂಚಾಣದ ಜೊತೆಗೂಡಿ ಮಣ್ಣಾದರೋ //



ಕಲ್ಮೇಶ ಬಡಿಗೇರ
೯೭೪೩೫೩೯೬೫೭
............ಬಾದಾಮಿ........

- Kalmesh Badiger

29 Sep 2020, 07:36 pm
Download App from Playstore: