ನನ್ನಲ್ಲಿ ನಾನಾದಾಗ

ನನ್ನ ನೋವು ನಲಿವುಗಳ
ಕಾರಣ ನನ್ನ ಅಂತರಂಗದಲ್ಲಿ
ಕಾಣುವುದು ನನ್ನಲ್ಲಿ ನಾನಾದಾಗ.

ನನ್ನ ಸಾಧನೆಯ ಹಾದಿ
ಏನೆಂಬುದು ನನ್ನ ಅಂತರಂಗದಲ್ಲಿ
ಕಾಣುವುದು ನನ್ನಲ್ಲಿ ನಾನಾದಾಗ.

ಹುಟ್ಟು - ಸಾವು ಎಂಬ ಮಮ೯ಗಳ
ಮೂಲ ನನ್ನ ಅಂತರಂಗದಲ್ಲಿ
ತಿಳಿಯುವುದು ನನ್ನಲ್ಲಿ ನಾನಾದಾಗ.

ಜನರ ನಡುವಿನ ವಾದ ವಿವಾದಗಳ
ನೆಲೆ ನನ್ನ ಅಂತರಂಗದಲ್ಲಿ
ಕಾಣುವುದು ನನ್ನಲ್ಲಿ ನಾನಾದಾಗ.

ಅಧಿಕಾರ ಸಿಕ್ಕಾಗ ಅಂಧಕಾರದ
ಹರಿವು ನನ್ನ ಅಂತರಂಗದಲ್ಲಿ
ಕಾಣುವುದು ನನ್ನಲ್ಲಿ ನಾನಾದಾಗ.

ಜಾತಿ ಮತ ಪಂತ ಗಳ
ಮೀರಿದ ಜೀವನ ನನ್ನ ಅಂತರಂಗದಲ್ಲಿ
ಕಾಣುವುದು ನನ್ನಲ್ಲಿ ನಾನಾದಾಗ.

ಎಲ್ಲ ಧಮ೯ ತತ್ವಗಳ
ಸಿದ್ದಾಂತ ನನ್ನ ಅಂತರಂಗದಲ್ಲಿ
ಅರಿಯುವೆನು ನನ್ನಲ್ಲಿ ನಾನಾದಾಗ.

ಎಲ್ಲರ ಮನಸುಗಳ
ಆಳ ನನ್ನ ಅಂತರಂಗದಲ್ಲಿ
ಅಳೆಯುವೆನು ನನ್ನಲ್ಲಿ ನಾನಾದಾಗ.

ನನ್ನಲ್ಲಿ ನಾನಾಗುವ ಪರಿ
ತಿಳಿಯುವ ಮನ ನನ್ನಲ್ಲಿ ಇಲ್ಲದಾಗ,
"ಅರಿವೇ ಗುರು" ಕಾಣುವುದೆಲ್ಲಿ?

ಯಾರನ್ನು ದೂಷಿಸಲಿ
ನನ್ನ ಅಂತರಂಗದ ಪರಿ
ನಾನೇ ಅರಿಯಲಾರೆ.
-------ಖಾಜಾ.

- ಖಾಜಾ

30 Sep 2020, 10:18 am
Download App from Playstore: