ದಿಗ್ಬಂಧನ
ಚುನಾವಣೆ ಬಂತೆಂದರೆ
ಬರುವರು ಭೂತ ಪ್ರೇತಗಳ ರೀತಿ
ಎಲ್ಲಿಯಂದ್ದರಲ್ಲಿಗೆ
ಕರೆಯದಿದ್ದರು ಬರುವರು
ಬಂದು ಬಿದ್ದು ಬೇಡುವರು
ಕೈ ಮುಗಿದು ಅಣ್ಣ ಅಕ್ಕ ತಂಗಿ ತಮ್ಮ
ಅಮ್ಮ ಅಪ್ಪ ಎಂದು ಹಲ್ಲು ಗಿರುಚುತ್ತ
ಬೇಡವೆಂದರು ಬರುವುದು
ಮನೆ ಬಾಗಿಲಿಗೆ ಚಿಲ್ಲರೆ ನೋಟು
ಸುಮ್ಮನಿದ್ದರು ಕರೆದು ತುಂಬುವರು
ಚಡ್ಡಿ ಜೇಬಿಗೆ ಗುಂಡು ತುಂಡು
ಏನಿದು ಗೌರವ ಏನಿದು ಸತ್ಕಾರ
ಹಹ್ ಹಹ್ ಬಾಲೆ ಬಾಲೆ
ಫಲಿತಾಂಶ ಬಂತೆಂದರೆ
ಯಾವ ಭೂತ ಪ್ರೇತಗಳು
ಕಣ್ಣಿಗೆ ಬಿದ್ದಿಲ್ಲ ಎಲ್ಲಿ ಯಾವ ಮರಕ್ಕೆ
ಜೋತು ಬಿದ್ದಿವೆಯೋ ಗೋತ್ತಿಲ್ಲ
ಆದರು ಕೇಡಕು ಮಾಡುತ್ತಿವೆ
ಕಣ್ಣಿಗೆ ಕಾಣದಂತೆ ಭೂತ ಪ್ರೇತಗಳು
ಜನರ ಮತ ಹಣ ತಿಂದು
ತಕ್ಕ ಶಾಸ್ತಿ ಮಾಡಬೇಕಾಗಿದೆ ಎಲ್ಲರೂ
ನಿಮ್ಮ ನಿಮ್ಮ ಮತಗಳ ದಿಗ್ಬಂಧನ ಮಾಡಿ
ಚಡ್ತಾ ಮಾಡುವ ಭೂತ ಪ್ರೇತಗಳಿಗೆ
- ರಾಜು ಹಾಸನ
30 Sep 2020, 02:54 pm
Download App from Playstore: