ಬರಿ ಓಳು ಬರಿ ಓಳು
ಸತ್ತ ಹೇಣದ ಮೇಲೆ ರಾಜಕೀಯ
ಮಾಡುವ ದುಷ್ಟ ನಾಯಕರ ಕಣ್ಣಿಗೆ
ಪಾಳು ಭೂಮಿ ಕಂಡರೆ ಸಾಕು
ಬಡಿದು ಬಾಯಿಗೆ ಹಾಕಿಕೊಂಡು
ಬಡ ಜನರ ಬಾಯಿಗೆ ಹಾಕುವರು
ಮೂರಿಡಿ ಮಣ್ಣು ತಲೆ ಮೇಲೆ ಅಕ್ಕಿ ಕಾಳು
ಭೂಮಿಯನ್ನೇ ಕೊಳ್ಳೆ ಹೊಡೆಯುವ
ಜನ ನಾಯಕ ನೀಚ ನಾಯಕ
ಮಂಗ ಮಾನವನಿಗೆ ಸಿಕ್ಕಿಲ್ಲ
ಆಗಸಕ್ಕೆ ಏರುವ ಸೇತುವೆ ಏಣಿ
ಆದರೂ ನಿಂತಿಲ್ಲ ಹಾರಾಟ ತೂರಾಟ
ಮಂಗ ಮನುಷ್ಯನ ಮಂಗನ ಆಟ
ಸಿಕ್ಕಿಬಿಟ್ಟರೆ ಮುಕ್ಕಿಬಿಡುವರು
ಈ ಆಗಸದ ಆಯಸ್ಸು
ಆ ಮಸೂದೆ ಈ ಮಸೂದೆ ಎಂದು
ಬೊಬ್ಬೆ ಹೊಡೆದು ತಿದ್ದುಪಡಿ ಮಾಡುವ
ಮುಟ್ಟಳ ನಾಯಕರು ತರುವುದಿಲ್ಲ
ಒಂದು ಕಾನೂನು ಒಂದು ಮಸೂದೆ
ಬಡ ಜನರ ಸ್ತ್ರೀ ಶೋಷಿತರ ರಕ್ಷಣೆಗೆ
ಬಾಯಿ ಮಾತಿಗೆ ಕೇಳಿದರೆ
ಬಾಯಿ ಬಡುಕ ನಾಯಕರು ಹೇಳುವರು
ಬರಿ ಓಳು ಬರಿ ಓಳು
- ರಾಜು ಹಾಸನ
01 Oct 2020, 03:37 pm
Download App from Playstore: