ಜವಾರಿ ಕೊಳಿ

ಜವಾರಿ ತಳಿ ಇದು ನಮ್ಮನೆ ಕೋಳಿ
ಆ ಆ ಎನ್ನಲು ಓಡುತಾ ಬರುವುದು
ಕಾಳನು ಕಾಣಲು ಕೊಕ್ಕರೋಕ್ಕ ಎಂದು
ನೆಲ ಕುಕ್ಕುತಾ ಕೆದರುತಾ ನಿಲ್ಲುವುದು //

ಅಮ್ಮನ ದ್ವನಿಯನು ಕೇಳಲು ಕೋಳಿ
ಕಾಲಲಿ ಗಿರಕಿಯ ಹೊಡೆಯುವುದು
ಚಿಕ್ಕ ಮಕ್ಕಳ ಪರಿವೆ ಇಲ್ಲದೆ ಕೊಳಿಯು
ಕೊಕ್ಕರೊಕ್ಕ ಎನ್ನುತಾ ಹಾರುವುದು //

ತಿಪ್ಪೆಯ ಮೇಲಿನ ತೆಪ್ಪವ ಕೆದರುತಾ
ದಪ್ಪನೆ ಹುಳುಗಳ ಮೇಯುವುದು
ಚಿಂವ್ ಚಿಂವ್ ಎನ್ನುವ ಪುಟಾಣಿ ಮರಿಗೆ
ಕುಕ್ಕುತಾ ಗುಟುಕನು ನೀಡುವುದು //

ಬೆಕ್ಕನು ಕಂಡರೆ ರೆಕ್ಕೆಯ ಬಿಚ್ಚುತಾ
ಕೊಕ್ಕರೋಕ್ ಎನ್ನುತ್ತಾ ಹಾರುವುದು
ಕಣ್ಣಿಗೆ ಕುಕ್ಕಿ ಮೈಯನು ಪರಚುತಾ
ಸೊಕ್ಕನು ಅಡಗಿಸಿ ಕಳಿಸುವುದು //

ಸಜ್ಜೇಯ ಜೋಳದ ಚೀಲವ ಕುಕ್ಕಿ
ಕಚ್ಚಿ _ ಬಿಚ್ಚಿ ಕೆದರಿ ಹಾಕುವುದು
ಅಜ್ಜಿಯ ದಿಂಬು ಕೌದಿಯ ಕೆದರಿ
ಹರಿದು ಮುರಿದು ತಾ ಹಾಕುವುದು //

ಕಲ್ಮೇಶ ಬಡಿಗೇರ
9743539657
........ಬಾದಾಮಿ.......

- Kalmesh Badiger

04 Oct 2020, 08:18 am
Download App from Playstore: