ಮಂಗನ ಮರಿ
ನಮ್ಮನೆ ಅಂಗಳದಲ್ಲಿ ಒಂದು
ಅಜ್ಜನ ಆಲದ ಮರ ವಿಹುದು
ಮಂಗನ ಮರಿಯು ಕೊಂಬೆಯ
ಮೇಲೆ ನೆಗೆಯುತ ಜಿಗಿಯುವುದು //
ಕೈಯನು ತೋರಲು ಛಂಗನೆ ಹಾರಿ
ಕುಣಿಯುತ ಹಾರುತ ಬರುವುದು
ಕೈಯನು ನೀಡಲು ಕುಲಕುತಾ
ಮುತ್ತನು ಕೊಟ್ಟಂತೆ ಮಾಡುವುದು //
ತಲೆಯನು ಕೆದರುತಾ ಕೂಡಲು
ಬಂದು ಹೇಣನು ನೋಡುವುದು
ಹಣ್ಣನ್ನು ಕೊಡಲು ಹಲ್ಲನು ಕಿರಿದು
ಗಬ ಗಬಾ ತಿನ್ನುತ್ತಾ ಕೂಡುವುದು //
ಅಂಗಿಯ ತೊಡಿಸಲು ಮೈಯ್ಯನು
ಪರಚುತ ಮರವನು ಏರುವುದು
ಆ ಕಡೆ ಈ ಕಡೆ ಜಿಗಿಯುತ್ತಾ ಮಂಗವು
ಜೀಕವ ಹೋಡೆಯುತ ನಲಿಯುವುದು //
ಆಳುವ ಮಕ್ಕಳ ದ್ವನಿಯ ಕೇಳಲು
ಅರಚುತಾ ಓಡೋಡಿ ಬರುವುದು
ಅಮ್ಮನ ಕೈಯಲಿ ರೊಟ್ಟಿಯ ಕಂಡು
ಕಿರಚುತಾ ಮೈ ಪರಚುತ ಕೂಡುವುದು //
ಅಜ್ಜನ ಕೊಲನು ಕೈಯಲಿ ಕೊಟ್ಟರೆ
ನಟನೆಯ ಮಾಡುತ ಲಿರುವುದು
ಕಟ್ಟೆಯ ಮೇಲೆ ಕುಳಿತರೆ ಸಾಕು
ನಮ್ ಜೊತೆ ಆಟವ ಆಡುವುದು //
ಕಲ್ಮೇಶ ಬಡಿಗೇರ
9743539657
.....ಬಾದಾಮಿ.......
- Kalmesh Badiger
04 Oct 2020, 08:38 am
Download App from Playstore: