ಹದಿನಾರರ ಹುಡುಗಿ ನಾ

ಹದಿನಾರರ ಹುಡುಗಿ ನಾನು
ಭಿನ್ನಾನದ ಬೇಡಗಿಯು ನಾನು
ಬ್ಯಾಸರಕೀ ಮೂಡತಾವ
ನನಗ ಆಸರಕ ಬೇಡತಾವ //

ಎಳೆ ಮನಸಿನ ಆಳದಲಿ
ಮಜ್ಜಿಗೆ ಕಡದಂಗೆ ಆಗಿ
ಗೆಜ್ಜೆ ಕಾಲ್ ಕುಣಿಸತಾವಾ
ಎದೆ ನಡುಗಿ ಹಾಡತಾವ //

ಜೋಡಿ ಗಿಳಿಗಳ ಕಂಡು
ಜೊತೆ ಇರದೆ ನಾ ನೊಂದು
ಕಥೆ ಹೇಣೆಯುತ ಕುತಂಗಾತ
ನನ್ನ ಕನಸೆಲ್ಲ ಬಲಿತಂಗಾತಾ //

ಮಕ್ಕಳ ಮಾತನು ಮುರಿದು
ಅಕ್ಕರೆಯ ಆಟವನ್ನು ಅಳಿಸಿ
ಹುಬ್ಬಿಗೆ ಕೈ ಹಚ್ಚಿ ಹುಡುಕುತಾವ
ಮಬ್ಬಾದ್ರ ಮನಸು ಮುದರತಾವ //

ಕಲ್ಮೇಶ ಬಡಿಗೇರ
9743539657
......ಬಾದಾಮಿ.......

- Kalmesh Badiger

04 Oct 2020, 08:53 am
Download App from Playstore: